Breaking News

ಬೆಳಗಾವಿ| ಬಸ್‌- ಬೈಕ್‌ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

Spread the love

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿ ಹೊರವಲಯದಲ್ಲಿ ಶನಿವಾರ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್‌ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಯಬಾಗ ತಾಲ್ಲೂಕಿನ ಹಾಲಶಿರಗೂರು ಗ್ರಾಮದವರಾದ ಭಗವಂತ ಶಿವರಾಯ ಕಾಂಬಳೆ (45), ವಿಶ್ವನಾಥ ಎಸ್‌.

ಕಾಂಬಳೆ (24) ಹಾಗೂ ಕುಮಾರ ಬಾಳಪ್ಪ ಕಾಂಬಳೆ (35) ಮೃತಪಟ್ಟವರು. ಮೂವರೂ ಸಹೋದರ ಸಂಬಂಧಿಗಳಾಗಿದ್ದಾರೆ.

ಸರ್ಕಾರಿ ಬಸ್‌ ಹಾಲಗಿ ಕಡೆಯಿಂದ ಸಾಂಗ್ಲಿ ಕಡೆಗೆ ಹೊರಟಿತ್ತು. ಮೂವರೂ ಸಹೋದರ ಸಂಬಂಧಿಗಳು ಒಂದೇ ಬೈಕಿನಲ್ಲಿ ಹಾಲಶಿರಗೂರು ಕಡೆಗೆ ಹೊರಟಿದ್ದರು. ಹಾರೂಗೇರಿ- ಕುಡಚಿ ಹೆದ್ದಾರಿ ಮೇಲೆ ವೇಗವಾಗಿ ಬಂದ ವಾಹನಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದವು.

ಬಸ್ಸಿನ ಚಕ್ರಕ್ಕೆ ಸಿಲುಕಿದ ಮೂವರೂ ಸಹೋದರು ಸ್ಥಳದಲ್ಲೇ ಕೊನೆಯುಸಿರೆಳೆದರು. ಅಪಘಾತ ತ‍ಪ್ಪಿಸಲು ಬಸ್‌ ಚಾಲಕ ವಾಹನವನ್ನು ರಸ್ತೆ ಬದಿಗೆ ಇಳಿಸಿದರು. ಕೂದಲೆಳೆ ಅಂದರದಲ್ಲಿ ಬಸ್‌ ಪಲ್ಟಿಯಾಗುವುದು ತಪ್ಪಿತು ಎಂದು ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ