Home / ಜಿಲ್ಲೆ / ಬೆಂಗಳೂರು / ಡಿಜೆಹಳ್ಳಿ ಗಲಭೆ ಪ್ರಕರಣ : ಸಂಪತ್‍ರಾಜ್-ಜಾಕೀರ್ ವಿಚಾರಣೆಗೆ ಮುಂದಾದ ಎನ್‍ಐಎ

ಡಿಜೆಹಳ್ಳಿ ಗಲಭೆ ಪ್ರಕರಣ : ಸಂಪತ್‍ರಾಜ್-ಜಾಕೀರ್ ವಿಚಾರಣೆಗೆ ಮುಂದಾದ ಎನ್‍ಐಎ

Spread the love

ಬೆಂಗಳೂರು,ಅ.14-ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಗಲಭೆಗೆ ಸಂಬಂಸಿದಂತೆ ತನಿಖೆ ನಡೆಸುತ್ತಿರುವ ಎನ್‍ಐಎ ಮಾಜಿ ಮೇಯರ್ ಸಂಪತ್‍ರಾಜ್ ಮತ್ತು ಅವರ ಆಪ್ತ, ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್‍ನ್ನು ವಿಚಾರಣೆಗೊಳಪಡಿಸಲು ತೀರ್ಮಾನಿಸಿದೆ.

ಪ್ರಕರಣದ ಹಿನ್ನೆಲೆಯಲ್ಲಿ ಈ ಇಬ್ಬರಿಗೂ ವಿಚಾರಣೆಗೆ ಹಾಜರಾಗು ವಂತೆ ಸದ್ಯದಲ್ಲೇ ಎನ್‍ಐಎ ನೋಟಿಸ್ ನೀಡಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಶಾಸಕರಾದ ಜಮೀರ್ ಅಹಮ್ಮದ್ ಖಾನ್ ಮತ್ತು ರಿಜ್ವಾನ್ ಅವರನ್ನು ಎನ್‍ಐಎ ವಿಚಾರಣೆಗೊಳಪಡಿಸಿ ಗಲಭೆಗೆ ಸಂಬಂಸಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದೆ.

ಮತ್ತೊಂದೆಡೆ ಬೆಂಗಳೂರು ನಗರದ ಸಿಸಿಬಿ ಪೊಲೀಸರು ಸಹ ಸಂಪತ್‍ರಾಜ್ ಮತ್ತು ಜಾಕೀರ್ ಅವರನ್ನು ವಿಚಾರಣೆ ಗೊಳಪಡಿಸಲು ಕಾದು ಕುಳಿತಿದ್ದಾರೆ. 2ನೇ ಬಾರಿ ವಿಚಾರಣೆಗೆ ಹಾಜರಾಗು ವಂತೆ ಸಂಪತ್‍ರಾಜ್ ಮತ್ತು ಜಾಕೀರ್‍ಗೆ ನೋಟಿಸ್ ನೀಡಲಾಗಿತ್ತು. ಸಂಪತ್‍ರಾಜ್ ಅನಾರೋಗ್ಯದ ನಿಮಿತ್ತ ವಿಚಾರಣೆಗೆ ಹಾಜರಾಗಿಲ್ಲ. ಜಾಕೀರ್ ವಿಚಾರಣೆಗೆ ಹಾಜರಾಗದೆ ಗೈರಾಗಿದ್ದಾನೆ.

ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಗಲಭೆಗೆ ಸಂಬಂಸಿದಂತೆ ಸಿಸಿಬಿ ಪೊಲೀಸರು ಮತ್ತು ಪೂರ್ವ ವಿಭಾಗದ ಪೊಲೀಸರು ಈಗಾಗಲೇ ಮಧ್ಯಂತರ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಘಟನೆಯಲ್ಲಿ ಮಾಜಿ ಮೇಯರ್ ಸಂಪತ್‍ರಾಜ್, ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್ ಪಾತ್ರವಿದೆ ಎಂದು ಹೇಳಲಾಗಿದೆ.

ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮತ್ತು ಅವರ ಸಂಬಂಕರ ಮನೆಗಳ ಮೇಲೆ ದಾಳಿ ಮಾಡಲು ಸಂಪತ್‍ರಾಜ್ ಅವರ ಕುಮ್ಮಕ್ಕು ಇದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಸಂಪತ್‍ರಾಜ್‍ಗೆ ಜಾಕೀರ್ ಸಹಕರಿಸಿದ್ದರು ಎಂಬ ಆರೋಪವೂ ಸಹ ಕೇಳಿಬಂದಿದೆ.

ಈಗಾಗಲೇ ಸಂಪತ್‍ರಾಜ್ ಮತ್ತು ಜಾಕೀರ್ ಅವರುಗಳ ಸಂಪರ್ಕದಲ್ಲಿದ್ದ ಕೆಲವು ವ್ಯಕ್ತಿಗಳನ್ನು ಪೊಲೀಸರು ಬಂಸಿ ಅವರಿಂದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಘಟನೆ ದಿನ ಸಂಪತ್‍ರಾಜ್ ಮತ್ತು ಜಾಕಿರ್ ಬಹಳ ಹೊತ್ತು ಪರಸ್ಪರ ಮೊಬೈಲ್ ಸಂಭಾಷಣೆಯಲ್ಲಿ ತೊಡಗಿದುದ್ದು ತನಿಖೆಯಿಂದ ತಿಳಿದು ಬಂದಿದೆ.


Spread the love

About Laxminews 24x7

Check Also

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Spread the love ಬೆಂಗಳೂರು: ಒಂದು ತಿಂಗಳಿಂದ ನಡೆಯುತ್ತಿದ್ದ ಅಬ್ಬರದ ಪ್ರಚಾರಕ್ಕೆ ಬುಧವಾರ ತೆರೆ ಬೀಳಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ