Breaking News

ಹಿಂಡಲಗಾ ಕೈದಿ ಕೇಂದ್ರ ಸಚಿವರಿಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ

Spread the love

ಬೆಳಗಾವಿ: ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ ಕೈದಿಯಿಂದಲೇ ಶನಿವಾರ ಬೆಳಗ್ಗೆ ನಿತಿನ್​ ಗಡ್ಕರಿಗೆ ಕರೆ ಮಾಡಿ, ಬಾಂಬ್ ಇಟ್ಟು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಮಾಹಿತಿ ಸಿಕ್ಕ ಕೂಡಲೆ ಶನಿವಾರ ರಾತ್ರಿ ನಾಗ್ಪುರದ ಪೊಲೀಸ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ.

ಆದರೆ ಎಲ್ಲರನ್ನೂ ಕಾಡುತ್ತಿದ್ದ ಪ್ರಶ್ನೆ ಒಂದೇ. ಕೈದಿಯೊಬ್ಬ, ಕೇಂದ್ರ ಮಂತ್ರಿಗೆ ಜೈಲಿನಿಂದ ಕರೆ ಮಾಡಿದ್ದು ಹೇಗೆ ಎಂದು

ಜೀವ ಬೆದರಿಕೆ ಸಂಬಂಧ ಮಹಾರಾಷ್ಟ್ರದ ನಾಗ್ಪುರದ ಪೊಲೀಸರ ಗಮನಕ್ಕೆ ನಿತಿನ್​ ಗಡ್ಕರಿ ತಂದಿದ್ದು, ಆರೋಪಿ ಶೋಧಕ್ಕೆ ಹಿಂಡಲಗಾ ಜೈಲಿಗೆ ಬಂದು ನಾಗ್ಪುರ ಪೊಲೀಸರು ಶನಿವಾರ ರಾತ್ರಿಯಿಂದ ವಿಚಾರಣೆ ನಡೆಸಿದ್ದಾರೆ. ನಾಗ್ಪುರ ಪೊಲೀಸರಿಗೆ ಕೊಲ್ಲಾಪುರ, ಸಾಂಗ್ಲಿ ಬೆಳಗಾವಿ ನಗರ ಪೊಲೀಸರು ಸಾಥ್ ನೀಡಿದ್ದರು. ಈ ಸಂದರ್ಭ ಆರೋಪಿ ಪತ್ತೆಯಾಗಿದ್ದು ಆತ ಫೋನ್​ ಮಾಡಿದ್ದು ಹೇಗೆ ಎಂಬ ಮಾಹಿತಿ ಲಭಿಸಿದೆ.

 

ಬೆಳಗಾವಿಯಿಂದಲೇ ನಿನ್ನೆ ಬೆಳಗ್ಗೆ ಕೇಂದ್ರ ಸಚಿವ ನಿತೀನ್ ಗಡ್ಕರಿಗೆ ಜೀವ ಬೆದರಿಕೆಯ ಕರೆ ಬಂದಿತ್ತು. ಸಂಜೆ ಮೂರು ಗಂಟೆಗಳ ಕಾಲ ಜೈಲಿನಲ್ಲಿ ಶೋಧಕಾರ್ಯ ನಡೆಸಿರುವ ಪೊಲೀಸರು ಈಗ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದಾರೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಂಗಳೂರು ಮೂಲದ ಆರೋಪಿ ಕರೆ ಮಾಡಿದ್ದು ಎಂದು ತಿಳಿದುಬಂದಿದೆ.

ಜೈಲಿನಲ್ಲಿದ್ದ ಬೆಳಗಾವಿ ನಗರದ ಆರೋಪಿ ಮೊಬೈಲಿನಿಂದ ಕರೆ ತನ್ನ ಮಗಳಿಗೆ ಕರೆ ಮಾಡುವುದಾಗಿ ಹೇಳಿ ಕೇಂದ್ರ ಸಚಿವರಿಗೆ ಜೀವಬೆದರಿಕೆ ಹಾಕಿದ್ದಾನೆ. ಸದ್ಯಕ್ಕೆ ಮಹಾರಾಷ್ಟ್ರ ಹಾಗೂ ಬೆಳಗಾವಿ ಪೊಲೀಸರಿಂದ ತನಿಖೆ ನಡೆಯುತ್ತಿದ್ದು ಇಂದು ಜೈಲಿನಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ