Home / ರಾಜಕೀಯ / ಸಮಗ್ರ ಲಿಂಗಾಯತ ಸಮಾಜ ಒಂದಾಗಲಿ: C.M. ಬೊಮ್ಮಾಯಿ

ಸಮಗ್ರ ಲಿಂಗಾಯತ ಸಮಾಜ ಒಂದಾಗಲಿ: C.M. ಬೊಮ್ಮಾಯಿ

Spread the love

ಧಾರವಾಡ: ಸಮಗ್ರ ವೀರಶೈವ ಲಿಂಗಾಯತ ಸಮುದಾಯ ಒಳ ಪಂಗಡಗಳನ್ನು ಮರೆತು ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಲಹೆ ನೀಡಿದರು.

ಶ್ರಿ ಲಿಂಗರಾಜ್ ವಿವಿದುದ್ದೇಶ ಸಂಸ್ಥೆ ವತಿಯಿಂದ ನಡೆದ ಶಿರಸಂಗಿ ಲಿಂಗರಾಜರ 162 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 

ಲಿಂಗರಾಜ್ ಸರದೇಸಾಯಿ ಅವರ ಆದರ್ಶಗಳು ಲಿಂಗಾಯತ ಸಮಗ್ರ ಸಮುದಾಯಕ್ಕೆ ಮಾದರಿಯಾಗಬೇಕಿದೆ. ಲಿಂಗಾಯತ ಸಮುದಾಯದ ಶ್ರೇಷ್ಠರನ್ನು ಒಂದು ಪಂಗಡ ಅಥವಾ ಒಳ ಪಂಗಡಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.

ಎಲ್ಲರೂ ನಿಲುಕದ ನಕ್ಷತ್ರಗಳ ಬಗ್ಗೆ ಮಾತನಾಡುತ್ತೇವೆ. ಲಿಂಗರಾಜರಂತಹ ಮಹನೀಯರ ಆದರ್ಶದಿಂದ ಬದುಕಿನಿಂದ ಸಿರಿ ಬಂದಿದೆ. ಪರಕೀಯರ ಆಡಳಿತ, ಬ್ರಿಟೀಷರ ಆಡಳಿದಲ್ಲಿ ಯಾರು ಕೂಡ ಸೇರಿರಲಿಲ್ಲ. ಎಲ್ಲವನ್ನೂ ಮೀರಿ ರಾಣಿ ಚೆನ್ನಮ್ಮ ದೈತ್ಯ ಇಂಗ್ಲೀಷರನ್ನು ಎದುರಿಸಿದರು ಎಂದರು.

12 ನೇ ಶತಮಾನದ ನಂತರ 18 ನೇ ಶತಮಾನದಲ್ಲಿ ಭಾರಿ ಬದಲಾವಣೆ ಬಂತು. ಸ್ವತಂತ್ರ ಹೋರಾಟದ ಜೊತೆಗೆ ಶಿಕ್ಷಣದಲ್ಲಿ ಬದಲಾವಣೆ ಶುರುವಾಯಿತು. ರಾಜ್ಯದಲ್ಲಿ ಲಿಂಗರಾಜ್ ಅವರು ಇಡೀ ದೇಶಗತಿಯನ್ನು ಕೊಡುಗೆಯಾಗಿ ನೀಡಿದರು. ವೀರಶೈವ ಮಹಾಸಭಾದ ಅಧ್ಯಕ್ಷತೆ ವಹಿಸಿದರು. ಹಿರಿತನ‌ ಮೆರೆದರು. ಸಮಾಜವನ್ನು ಒಗ್ಗುಡಿಸಿಕೊಂಡು‌ ಮುಂದೆ ಹೋಗೋಣಾ. ಲಿಂಗರಾಜರ ಹೆಸರು ಉಳಿಸುವ ಎಲ್ಲಾ ಕೆಲಸಗಳಿಗೂ ಎಲ್ಲಾ ಸಹಾಯ ಮಡುತೇನೆ. ಶಿರಸಂಗಿ ಲಿಂಗರಾಜ ಟ್ರಸ್ಟ್ ಅಭಿವೃದ್ದಿ ಮೂಲಕ ಇಡೀ ಸಮುದಾಯಕ್ಕೆ ನೆರವಾಗಲು ಸಹಕಾರ ನೀಡುತ್ತೆನೆ. ಇದರ ನೇತೃತ್ವ ಮಾಜಿ ಸಚಿವ ಎಂ.ಬಿ.ಪಾಟೀಲ ವಹಿಸಲಿ ಎಂದರು.

ವೀರಶೈವ ಲಿಂಗಾಯತ ಸಮುದಾಯ ಒಟ್ಟಾಗಿ ಹೋಗೋಣ. ಕರ್ನಾಟಕದಾದ್ಯಂತ ಶೈಕ್ಷಣಿಕ ಕ್ರಾಂತಿಯಾಯಿತು ಇದು ಒಂದು ಜಾತಿಗೆ ಸೀಮಿತವಲ್ಲ ಎಂದರು.

ಬಡವರಿಗೆ ಮಠಗಳು ಆಶ್ರಯ ನೀಡಿದವು. ನಾಡು ಸಿರಿಯಾಗಲು ಉತ್ತರ ಕರ್ನಾಟಕದ ಮಠಗಳ ತ್ರಿವಿಧ ದಾಸೋಹ ಮಾಡಿವೆ. ಲಿಂಗರಾಜರ ಮಾರ್ಗದಲ್ಲಿಯೇ ಕೆಎಲ್ ಇ ಬಿ.ಎಲ್ಡಿಇ , ವಿಜಯಪುರ, ಕಲಬುರ್ಗಿ ಯಲ್ಲಿನ ಲಿಂಗಾಯತ ಶಿಕ್ಷಣ ಸಂಸ್ತೆಗಳು ಬೆಳೆದು ಹೆಮ್ಮರವಾಗಿ ಬೆಳೆದು ನಿಂತಿವೆ ಎಂದರು.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ