Breaking News

ನಿರೂಪಕಿಯ ಮೊಬೈಲ್​ ಕಾಲ್ ರೆಕಾರ್ಡ್ ಡಿಲೀಟ್ ಮಾಡಲು ಘಟಾನುಘಟಿಗಳು ಒತ್ತಡ ಹೇರುತ್ತಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.?.

Spread the love

ದಕ್ಷಿಣ ಕನ್ನಡ: ಌಂಕರ್ ಅನುಶ್ರೀ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿಯ ಮೊಬೈಲ್​ ಕಾಲ್ ರೆಕಾರ್ಡ್ ಡಿಲೀಟ್ ಮಾಡಲು ಘಟಾನುಘಟಿಗಳು ಒತ್ತಡ ಹೇರುತ್ತಿದ್ದಾರೆ ಅನ್ನೋ ಮಾತು ಕೇಳಿಬಂದಿದೆ. ಜೊತೆಗೆ, ಸಿಸಿಬಿ ಪೊಲೀಸರ ಮೇಲೆ ಪ್ರಕರಣ ತಿರುಚಲು ಒತ್ತಡ ಹೇರುತ್ತಿರೋದ್ಯಾರು? ಅನುಶ್ರೀ ಕಾಲ್ ಡಿಟೇಲ್ಸ್‌ ರಿವೀಲ್ ಆದ್ರೆ ಆ ಪ್ರಭಾವಿಗಳಿಗೆ ಸಂಕಷ್ಟ ಎದುರಾಗತ್ತಾ? ಎಂಬ ಪ್ರಶ್ನೆಗಳನ್ನೂ ಸಹ ಹಲವರು ಕೇಳುತ್ತಿದ್ದಾರೆ.

ಇದಕ್ಕೆ ಸಾಕ್ಷಿಯೆಂಬಂತೆ ಅನುಶ್ರೀ ಕಾಲ್ ರೆಕಾರ್ಡ್​ ಡಿಲೀಟ್​ ಮಾಡಲು ಪೊಲೀಸರಿಗೆ ಕೆಲ ಪ್ರಭಾವಿಗಳು ಭಾರಿ ಒತ್ತಡ ಹಾಕುತ್ತಿದ್ದಾರೆ ಎಂದು ಕೇಳಿಬಂದಿದೆ. ಕೆಲ VIP ರಾಜಕಾರಣಿಗಳಿಂದ ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರಲಾಗುತ್ತಿದ್ದು ಈ ಪ್ರಭಾವಿಗಳ ಕಾಟಕ್ಕೆ ಪೊಲೀಸ್ ಇಲಾಖೆ‌ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರಂತೆ. ಅನುಶ್ರೀ ಸಂಪರ್ಕದಲ್ಲಿದ್ದ ಆ ನಾಲ್ವರು ಪ್ರಭಾವಿಗಳು ಪ್ರಕರಣದ ದಿಕ್ಕು ತಪ್ಪಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಸಹ ಹೇಳಲಾಗಿದೆ.


Spread the love

About Laxminews 24x7

Check Also

ಕುಟುಂಬ ಸಮೇತರಾಗಿ ಬೆಳ್ಳಂಬೆಳಗ್ಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದ ಡಿಕೆಶಿ

Spread the love ಬೆಂಗಳೂರು: ಮೊದಲಿನಿಂದಲೂ ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಸಿಎಂ ಡಿ.ಕೆ ಶಿವಕುಮಾರ್‌  ಅವರು ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ