Breaking News
Home / ರಾಜಕೀಯ / “ಕಾಶ್ಮೀರ್ ಫೈಲ್ಸ್‌’ನ ಗಳಿಕೆ ದಾಖಲೆ ಮುರಿದ “ಕಾಂತಾರ’

“ಕಾಶ್ಮೀರ್ ಫೈಲ್ಸ್‌’ನ ಗಳಿಕೆ ದಾಖಲೆ ಮುರಿದ “ಕಾಂತಾರ’

Spread the love

ಮುಂಬೈ: ಬಾಕ್ಸ್‌ ಆಫಿಸ್‌ನಲ್ಲಿ ಹಿಂದಿ ಅವತರಿಣಿಕೆಯ “ಕಾಂತಾರ’ ಸಿನಿಮಾದ ಅಬ್ಬರ ಮುಂದುವರಿದಿದೆ. ಬಾಕ್ಸ್‌ ಆಫಿಸ್‌ ಗಳಿಕೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ “ಕಾಶ್ಮೀರ್ ಫೈಲ್ಸ್‌’ನ ಎಲ್ಲಾ ದಾಖಲೆಗಳನ್ನು ಕಾಂತಾರಾ ಸಿನಿಮಾ ಮುರಿದಿದೆ.

ಗಳಿಕೆಯಲ್ಲಿ ಶೇ. 1,000 ಪಟ್ಟು ಲಾಭ ಗಳಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ.

ರಿಷಭ್‌ ಶೆಟ್ಟಿ ನಿರ್ದೇಶನ ಮತ್ತು ನಟ ನೆಯ ಕಾಂತಾರ ಸಿನಿಮಾದ ಹಿಂದಿ ಅವ ತರಿಣಿಕೆಯು ಸೆ.30ರಂದು ಬಿಡುಗಡೆಯಾ ಯಿತು. ಈಗಾಗಲೇ ಕೆಜಿಎಫ್-2 ಸಿನಿಮಾದ ದಾಖಲೆಗಳನ್ನು ಕಾಂತಾರ ಮುರಿದಿದೆ. ಹಿಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಿ 46 ದಿನಗಳು ಕಳೆದರೂ ಚಿತ್ರಮಂದಿರಗಳಲ್ಲಿ ಹೌಸ್‌ ಫ‌ುಲ್‌ ಪ್ರದ ರ್ಶನ ಕಾಣುತ್ತಿದೆ. ಮೂಲಗಳ ಪ್ರಕಾರ, ಕಾಂತಾರ ಸಿನಿಮಾ ನಿರ್ಮಾಣಕ್ಕೆ 7.5 ಕೋಟಿ ರೂ. ವೆಚ್ಚವಾಗಿದೆ. ಹಿಂದಿ ಅವತರಿ ಣಿಕೆಯಲ್ಲಿ ಇದುವರೆಗೂ 76 ಕೋಟಿ ರೂ. ಆದಾಯ ಬಂದಿದೆ.

ಈ ಪೈಕಿ 68.5 ಕೋಟಿ ರೂ. ಲಾಭ ಗಳಿಸಿದೆ. ಈ ಮೂಲಕ ಶೇ. 913 ರಷ್ಟು ಲಾಭ ಗಳಿಸಿದಂತಾಗಿದೆ. ಶೀಘ್ರ ದಲ್ಲಿ ಲಾಭ ಗಳಿಕೆಯಲ್ಲಿ ಶೇ. 1,000 ರಷ್ಟು ತಲುಪಲಿದೆ. ನ. 24 ರಿಂದ ಒಟಿಟಿ ಯಲ್ಲಿ ಕಾಂತಾರ ಸಿನಿಮಾ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ