Breaking News
Home / ರಾಜಕೀಯ / ಸುರಕೋಡ: ಪ್ರೀತಿಸಿ ಮದುವೆಯಾದ ಜೋಡಿಗೆ ಸ್ವಜಾತಿಯವರಿಂದಲೇ ಬಹಿಷ್ಕಾರ

ಸುರಕೋಡ: ಪ್ರೀತಿಸಿ ಮದುವೆಯಾದ ಜೋಡಿಗೆ ಸ್ವಜಾತಿಯವರಿಂದಲೇ ಬಹಿಷ್ಕಾರ

Spread the love

ರಗುಂದ (ಗದಗ ಜಿಲ್ಲೆ): ಪ್ರೀತಿಸಿ ಮದುವೆಯಾದ ಒಂದೇ ಜಾತಿಯ ಯುವಕ, ಯುವತಿ 14 ವರ್ಷಗಳ ನಂತರ ಗ್ರಾಮಕ್ಕೆ ಬಂದಿದ್ದು, ಅವರ ಕುಟುಂಬವನ್ನು ಅದೇ ಜಾತಿಯವರು ಬಹಿಷ್ಕರಿಸಿದ ಪ್ರಕರಣ ತಾಲ್ಲೂಕಿನ ಸುರಕೋಡದಲ್ಲಿ ನಡೆದಿದೆ.

ಶೋಭಾ ಮತ್ತು ಶಿವಾನಂದ ಅವರ ಕುಟುಂಬ ಬಹಿಷ್ಕಾರಕ್ಕೊಳಗಾಗಿದೆ.

 

ಶೋಭಾ ಮತ್ತು ಶಿವಾನಂದ ಅವರ ಕುಟುಂಬ ಬಹಿಷ್ಕಾರಕ್ಕೊಳಗಾಗಿದೆ.

‘ಶೋಭಾ ಮನೆಯವರು ಕೆಲವರೊಂದಿಗೆ ಬಂದು ಶಿವಾನಂದ ಸುರಕೋಡ (ಮಾದರ) ಅವರ ತಂದೆ ಸಾಬಣ್ಣನವರ ಮನೆಗೆ ಕೀಲಿ ಹಾಕಿ ಕುಟುಂಬವನ್ನು ಹೊರಹಾಕಿದ್ದಾರೆ. ನಮ್ಮ ಜನಾಂಗದವರ ಜೊತೆ ನಾವು ಯಾರಾದರೂ ಮಾತನಾಡಿದರೆ ₹1 ಸಾವಿರ ದಂಡ ಹಾಗೂ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದ್ದಾರೆ’ ಎಂದು ಶಿವಾನಂದ ಅವರ ಸಹೋದರ ಮುತ್ತು ಸುರಕೋಡ ಭಾನುವಾರ ತಿಳಿಸಿದರು.

‘ಸುರಕೋಡ ಗ್ರಾಮಕ್ಕೆ ಶನಿವಾರ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬಹಿಷ್ಕಾರ ಹಾಕಿರುವುದನ್ನು ಪರಿಶೀಲಿಸಲಾಗಿದೆ. ಕುಟುಂಬಕ್ಕೆ ಪ್ರತ್ಯೇಕ ನಿವೇಶನ ನೀಡಲು ಸ್ಥಳ ಗುರುತಿಸಲಾಗಿದೆ’ ಎಂದು ತಹಶೀಲ್ದಾರ್ ಎ.ಡಿ. ಅಮರವಾದಗಿ ಹೇಳಿದರು


Spread the love

About Laxminews 24x7

Check Also

ಚುನಾವಣೆ ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಕೆ: ವಿಚಾರಣೆ ಏ.20ಕ್ಕೆ ಮುಂದೂಡಿಕೆ

Spread the loveಶಿವಮೊಗ್ಗ: ಲೋಕಸಭೆ ಚುನಾವಣೆ ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಚುನಾವಣೆ ಪ್ರಚಾರದ ವೇಳೆ ಹಾಗೂ ಸಭೆಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ