Breaking News

ಏಕಾಏಕಿ ಕ್ಯಾನ್ಸಲ್ ಆದ ಬೆಳಗಾವಿ-ತಿರುಪತಿ ವಿಮಾನ : ಪ್ರಯಾಣಿಕರ ಆಕ್ರೋಶ

Spread the love

ಬೆಳಗಾವಿ : ಬೆಳಗಾವಿ-ತಿರುಪತಿ ವಿಮಾನ ಏಕಾಏಕಿ ಕ್ಯಾನ್ಸಲ್ ಆದ ಪರಿಣಾಮ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ ಘಟನೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಇಂದು‌ ಸಂಜೆ 5:55ಕ್ಕೆ ಬೆಳಗಾವಿಯಿಂದ ತಿರುಪತಿಗೆ ಹೊರಡಬೇಕಿದ್ದ ಸ್ಟಾರ್ ಏರ್ಲೈನ್ಸ್ ಒಡೆತನದ ವಿಮಾನ ಏಕಾಏಕಿ ಕ್ಯಾನ್ಸಲ್ ಆಗಿದೆ.

ಏಕಾಏಕಿ ಕ್ಯಾನ್ಸಲ್ ಆದ ಬೆಳಗಾವಿ-ತಿರುಪತಿ ವಿಮಾನ : ಪ್ರಯಾಣಿಕರ ಆಕ್ರೋಶ

ಏರ್ಲೈನ್ಸ್ ಸಂಸ್ಥೆ ವಿರುದ್ಧ ಮೂವತ್ತಕ್ಕೂ ಅಧಿಕ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದು, ನಿಲ್ದಾಣದಲ್ಲಿರುವಕೌಂಟರ್ ನಲ್ಲಿ ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವ ಕಾರಣಕ್ಕೆ ಏಕಾಏಕಿ ವಿಮಾನ ಕ್ಯಾನ್ಸಲ್ ಮಾಡದ್ದೀರಿ, ನಿಲ್ದಾಣಕ್ಕೆ ಬಂದ ಬಳಿಕ ಫ್ಲೈಟ್ ಕ್ಯಾನ್ಸಲ್ ಅಂತ ಹೇಳಿದ್ದೀರಿ ಎಂದು ಕಿಡಿ ಕಾರಿದರು.

ವಿಜಯಪುರ, ಬಾಗಲಕೋಟೆ, ಮಹಾರಾಷ್ಟ್ರ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿರುವ ಪ್ರಯಾಣಿಕರು ತಿರುಪತಿಯಲ್ಲಿ ಈಗಾಗಲೇ ರೂಮ್ ಬುಕ್ ಮಾಡಿದ್ದರು. ವಾಪಾಸ್ ಬರಲು ಕೂಡ ವಿಮಾನ ಟಿಕೆಟ್ ಬುಕ್ ಮಾಡಿದ್ದರು.

ವಿಮಾನ ಕ್ಯಾನ್ಸಲ್ ಮಾಡುವುದರಿಂದ ಸಾಕಷ್ಟು ನಷ್ಟವಾಗುತ್ತದೆ ಎಂದು ಪ್ರಯಾಣಿಕರ ಆಕ್ರೋಶ ಹೊರ ಹಾಕಿ,ತಿರುಪತಿಗೆ ವಿಮಾನದಲ್ಲಿ ಬಿಡಬೇಕೆಂದು ಪ್ರಯಾಣಿಕರು ಪಟ್ಟು ಹಿಡಿದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ