Breaking News

4ಜನ ದರೋಡೆಕೋರರ ಹೆಡೆಮುರಿಕಟ್ಟಿದ ನಿಪ್ಪಾಣಿ ಪೊಲೀಸರು

Spread the love

ಭೀವಶಿ ಗ್ರಾಮದ ವ್ಯಾಪ್ತಿಯಲ್ಲಿ ಬಂಗಾರದ ವ್ಯಾಪಾರಿಯೊಬ್ಬ ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ಮೇಲೆ ಬಂದ ದರೋಡೆಕೋರರು ಆತನನ್ನು ತಡೆದು ನಗ ನಾಣ್ಯ ದೋಚಿದ್ದ ಕಿರಾತಕರನ್ನು ಬಂಧಿಸುವಲ್ಲಿ ನಿಪ್ಪಾಣಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು ನಿಪ್ಪಾಣಿ ತಾಲೂಕಿನ ಮಾಂಗೂರ್ ನಿವಾಸಿ ದೊಂಡಿರಾಮ ವಿಷ್ಣು ಕುಸಾಳೆ ದಿನಾಂಕ 08/04/02022ರಂದು ಸಾಯಂಕಾಲ ಚಿನ್ನದ ವ್ಯಾಪಾರವನ್ನು ಮುಗಿಸಿಕೊಂಡು ತಮ್ಮ ಅಂಗಡಿಯಲ್ಲಿದ್ದ 5 ಲಕ್ಷ 40 ಸಾವಿರ ಮೌಲ್ಯದ 75 ಗ್ರಾಂ ತೂಕದ ಚಿನ್ನದ ಆಭರಣ, ಮತ್ತು 2.5 ಕೆಜಿ ತೂಕದ ಬೆಳ್ಳಿಯ ಆಭರಣ ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಭೀವಶಿ ಗ್ರಾಮದ ಹದ್ದಿಯಲ್ಲಿ ಬೈಕ್ ಮೇಲೆ ಬಂದ ಮೂರು ಜನ ದರೋಡೆಕೋರರು ದೊಂಡಿರಾಮ್ ರವರನ್ನು ಕೆಳಕ್ಕೆ ಕೆಡವಿ ಅವರ ಹತ್ತಿರವಿದ್ದ ಎಲ್ಲಾ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು.

ಈ ಕುರಿತಂತೆ ನಿಪ್ಪಾಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಚಿಕ್ಕೋಡಿ ಡಿವೈಎಸ್‌ಪಿ ಬಸವರಾಜ್ ಯಲಿಗಾರ ಮಾರ್ಗದರ್ಶನದಲ್ಲಿ, ನಿಪ್ಪಾಣಿ ಸಿಪಿಐ ಸಂಗಮೇಶ್ ಶಿವಯೋಗಿ, ನೇತೃತ್ವದಲ್ಲಿ ಪಿಎಸ್‌ಐ ಅನೀಲ್ ಕುಂಬಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯನ್ನು ಕೈಗೊಂಡು ಒಟ್ಟು 6ಜನ ದರೋಡೆಕೋರರಲ್ಲಿ 4ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು 25 ವರ್ಷದ ಪ್ರದೀಪ ಅನೀಲ್ ಕಾಂಬಳೆ, 25 ವರ್ಷದ ಅವಧೂತ್ ಕೋಳಿ, 29 ವರ್ಷದ ಅಕ್ಷಯ್ ಕೊಂಡಿಗೇರಿ, 23 ವರ್ಷದ ಪಂಕಜ್ ಕೋಳಿ, ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿAದ 75 ಗ್ರಾಮ್ ಚಿನ್ನಾಭರಣ, 2.5ಕೆಜಿ ಬೆಳ್ಳಿಯ ಆಭರಣ, ಕೃತ್ಯಕ್ಕೆ ಬಳಸಿದ ಎರಡು ಬೈಕ್, 4 ಮೊಬೈಲ್ ಸೇರಿದಂತೆ ಒಟ್ಟು 6ಲಕ್ಷ 50 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿ ಕಾರ್ಯವೈಖರಿ ಕುರಿತಂತೆ ಎಸ್‌ಪಿ ಡಾ. ಸಂಜೀವ್ ಪಾಟೀಲ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ