Breaking News
Home / ರಾಜಕೀಯ / ಕಾರ್ಮಿಕ ಇಲಾಖೆಯಲ್ಲಿ ನೇಮಕಾತಿ: ಪದವೀಧರರಿಂದ ಅರ್ಜಿ ಆಹ್ವಾನ- 62 ಸಾವಿರ ರೂ.ವರೆಗೆ ಸಂಬಳ

ಕಾರ್ಮಿಕ ಇಲಾಖೆಯಲ್ಲಿ ನೇಮಕಾತಿ: ಪದವೀಧರರಿಂದ ಅರ್ಜಿ ಆಹ್ವಾನ- 62 ಸಾವಿರ ರೂ.ವರೆಗೆ ಸಂಬಳ

Spread the love

ಕಾರ್ಮಿಕ ಇಲಾಖೆಯಲ್ಲಿರುವ ಕಾರ್ಮಿಕ ನಿರೀಕ್ಷಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಉಳಿಕೆ ಮೂಲ ವೃಂದದ ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅ.29ರೊಳಗೆ ಅರ್ಜಿ ಸಲ್ಲಿಸತಕ್ಕದ್ದು.

 

ಕಾರ್ಮಿಕ ನಿರೀಕ್ಷಕ- ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಪರಿಶೀಲನೆ ನಡೆಸಿದ ಬಳಿಕ ಕನ್ನಡ ಭಾಷಾ ಪರೀಕ್ಷೆ , ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಗಳಿಸಿದ ಅಂಕ, ಚಾಲ್ತಿಯಲ್ಲಿರುವ ಮೀಸಲಾತಿ ನಿಯಮದನ್ವಯ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಅರ್ಜಿ ಸಲ್ಲಿಕೆ ವಿಧಾನ, ಪರೀಕ್ಷಾ ವಿಧಾನಗಳ ಕುರಿತು ಅಧಿಸೂಚನೆಯಲ್ಲಿ ವಿವರವಾಗಿ ನೀಡಲಾಗಿದೆ. 20 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 10 ಸ್ಥಾನ, ಎಸ್ಸಿಗೆ 3, ಎಸ್ಟಿಗೆ 1, ಪ್ರವರ್ಗ 2ಎಗೆ 3, ಪ್ರವರ್ಗ 2ಬಿಗೆ 1, ಪ್ರವರ್ಗ 3ಎಗೆ 1, ಪ್ರವರ್ಗ 3ಬಿಗೆ 1 ಸ್ಥಾನ ಮೀಸಲಿರಿಸಲಾಗಿದೆ. ಇದರಲ್ಲಿ ಕನ್ನಡ ಮಾಧ್ಯಮ, ಗ್ರಾಮೀಣ, ಅಂಗವಿಕಲ ಎಂಬಿತ್ಯಾದಿಯಾಗಿ ಮೀಸಲಾತಿ ನಿಗದಿಪಡಿಸಲಾಗಿದೆ.
ಒಟ್ಟು ಹುದ್ದೆಗಳು: 20

ಹುದ್ದೆ ವಿವರ ಹಾಗೂ ಅರ್ಹತಾ ಮಾನದಂಡ
* ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ನಿರೀಕ್ಷಕ: 20
ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು ಕಾನೂನಿನಡಿ ಸ್ಥಾಪಿತವಾದ ವಿಶ್ವವಿದ್ಯಾಯದಿಂದ ಪದವಿ ಪಡೆದಿರಬೇಕು. ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದ್ದು, ಪ್ರವರ್ಗ 2ಎ, 2ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನಶ್ರೇಣಿ: ಮಾಸಿಕ 33,450 – 62,600 ರೂ. ವೇತನ ಇದೆ.

ಆಯ್ಕೆ ವಿಧಾನ: ಕನ್ನಡ ಭಾಷಾ ಪರೀಕ್ಷೆ , ಸ್ಪರ್ಧಾತ್ಮಕ ಪರೀಕ್ಷೆ ಇರಲಿದ್ದು, ಕನ್ನಡ ಭಾಷಾ ಪರೀಕ್ಷೆ ಗೆ 150 ಅಂಕಗಳಿರಲಿದ್ದು, ಕನಿಷ್ಠ 50 ಅಂಕಗಳನ್ನು ಪಡೆದಿರಬೇಕು. ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಸಾಮಾನ್ಯ ಪತ್ರಿಕೆ ಮತ್ತು ರ್ನಿದಿಷ್ಟ ಪತ್ರಿಕೆ ಎಂದು 2 ಪತ್ರಿಕೆಗಳಿರಲಿದ್ದು, ಪ್ರತಿ ಪತ್ರಿಕೆಗೆ 300 ಅಂಕಗಳಿರಲಿದ್ದು, ಆನ್​ಲೈನ್​ ಅಥವಾ ಆ​ಲೈನ್​ ಮೂಲಕ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆ ಗಳ ಪಠ್ಯವು ವೆಬ್​ಸೈಟಿನಲ್ಲಿ ಲಭ್ಯವಿದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮೂಲ ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುವುದು.

ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ 600 ರೂ., ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 300 ರೂ., ಮಾಜಿ ಸೈನಿಕರಿಗೆ 50 ರೂ., ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಆದರೆ ಪ್ರಕ್ರಿಯೆ ಶುಲ್ಕವಾಗಿರುವ 35 ರೂ. ಅನ್ನು ಎಲ್ಲ ಅಭ್ಯರ್ಥಿಗಳು ಪಾವತಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೇ ದಿನ: 29.10.2022
ಶುಲ್ಕ ಪಾವತಿಗೆ ಕೊನೇ ದಿನ: 30.10.2022
ಅಧಿಸೂಚನೆಗೆ: https://bit.ly/3BVFNDE

ಮಾಹಿತಿಗೆ: https://kpsc.kar.nic.in

ಹೆಚ್ಚಿನ ಮಾಹಿತಿಗೆ ದೂ. ಸಂ: ಕೇಂದ್ರ ಕಚೇರಿ: 080-30574957/30574901
ಮೈಸೂರು: 0821-2545956, ಬೆಳಗಾವಿ: 0831-2475345, ಕಲಬುರಗಿ – 08472-227944, ಶಿವಮೊಗ್ಗ: 08182-228099 ಸಂಪರ್ಕಿಸಿ.

 

ವೇತನಶ್ರೇಣಿ: ಮಾಸಿಕ 33,450 – 62,600 ರೂ. ವೇತನ ಇದೆ.

ಮಾಹಿತಿಗೆ: https://kpsc.kar.nic.in


Spread the love

About Laxminews 24x7

Check Also

ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Spread the loveನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ ಹುಣಸಗಿ: ಕುಡಿಯುವ ನೀರಿನ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ