Breaking News

ಖ್ಯಾತ ತಮಿಳು ನಟನ ಮನೆ ಮೇಲೆ ಅಪರಿಚಿತರು ಕಲ್ಲೂ ತೂರಿದ್ದಾರೆ.

Spread the love

ಖ್ಯಾತ ತಮಿಳು ನಟನ ಮನೆ ಮೇಲೆ ಅಪರಿಚಿತರು ಕಲ್ಲೂ ತೂರಿದ್ದಾರೆ.

ನಟ ಸಂಗಮದ ಪ್ರಧಾನ ಕಾರ್ಯದರ್ಶಿಯಾಗಿರುವ ನಟ ವಿಶಾಲ್ ಮನೆಯ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


ಸದ್ಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೆ.26ರಂದು ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಬಗ್ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.


ಚೆನ್ನೈನ ಅಣ್ಣಾನಗರ 12ನೇ ಬೀದಿಯಲ್ಲಿ ನಟ ವಿಶಾಲ್ ಕುಟುಂಬ ಸಮೇತ ವಾಸವಾಗಿದ್ದಾರೆ. ಆದ್ರೆ ಸೆಪ್ಟಂಬರ್​ 26 ರಾತ್ರಿ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿ ಪರಾರಿಯಾಗಿದ್ದಾರೆ.


ನಟ ವಿಶಾಲ್‌ ಮೂಲತ: ಆಂಧ್ರ ಪ್ರದೇಶಕ್ಕೆ ಸೇರಿದವರಾದರೂ ಹೆಸರು ಮಾಡಿರುವುದು ಮಾತ್ರ ತಮಿಳಿನಲ್ಲಿ. ವಿಶಾಲ್​ ಕನ್ನಡಿಗರಿಗೆ ಕೂಡಾ ಮೆಚ್ಚಿನ ನಟ. ಕಳೆದ ವರ್ಷ ಪುನೀತ್‌ ರಾಜ್‌ಕುಮಾರ್‌ ನಿಧನರಾದಾಗ, ಇದೇ ವಿಶಾಲ್‌, ಪುನೀತ್‌ ಅವರನ್ನು ನೆನೆದು ಕಣ್ಣೀರಿಟ್ಟಿದ್ದರು.


ಪುನೀತ್‌ ರಾಜ್‌ಕುಮಾರ್‌ ನಡೆಸುತ್ತಿದ್ದ ಶಕ್ತಿಧಾಮದ ಮಕ್ಕಳಿಗೆ ಸಹಾಯ ಮಾಡಲು ಮುಂದಾಗಿದ್ದರು. ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬವನ್ನು ಕೂಡ ತಮಿಳುನಾಡಿನಲ್ಲಿ ವಿಶಾಲ್​ ಆಚರಿಸಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ