Breaking News
Home / ರಾಜಕೀಯ / ಹಣದ ದಾಹಕ್ಕೆ ಮಹಿಳೆಯರ ಗರ್ಭಕೋಶ ಕತ್ತರಿಸಿದ ವೈದ್ಯ.. ಸಿಎಂ ಮನೆಗೆ ಪಾದಯಾತ್ರೆಗೆ ನಿರ್ಧರಿಸಿದ ಮಹಿಳೆಯರು

ಹಣದ ದಾಹಕ್ಕೆ ಮಹಿಳೆಯರ ಗರ್ಭಕೋಶ ಕತ್ತರಿಸಿದ ವೈದ್ಯ.. ಸಿಎಂ ಮನೆಗೆ ಪಾದಯಾತ್ರೆಗೆ ನಿರ್ಧರಿಸಿದ ಮಹಿಳೆಯರು

Spread the love

ಹಾವೇರಿ: ಸರ್ಕಾರಿ ವೈದ್ಯನ ಹಣದ ದಾಹಕ್ಕೆ ಗರ್ಭಕೋಶ ಕಳೆದುಕೊಂಡ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ವಿವಿಧ ಗ್ರಾಮದ ಮಹಿಳೆಯರು ಇದೀಗ ಮತ್ತೆ ಸಿಎಂ ಮನೆಗೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಈ ಕುರಿತಂತೆ ರಾಣೆಬೆನ್ನೂರಲ್ಲಿ ಸಭೆ ನಡೆಸಿದ ಮಹಿಳೆಯರು ಬರುವ ತಿಂಗಳು 17 ರಂದು ಸಿಎಂ ಶಿಗ್ಗಾಂವಿ ನಿವಾಸಕ್ಕೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ರಾಣೆಬೆನ್ನೂರು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಪಿ ಶಾಂತ ತಾಲೂಕಿನ ಸುಮಾರು 15 ನೂರಕ್ಕೂ ಅಧಿಕ ಮಹಿಳೆಯರ ಗರ್ಭಕೋಶ ಕತ್ತರಿಸಿ ಹಾಕಿದ್ದ. ಕಾರಣವಿಲ್ಲದೇ ಗರ್ಭಕೋಶ ಕಳೆದುಕೊಂಡ ಮಹಿಳೆಯರು ಆರೋಗ್ಯದ ಹಲವು ಸಮಸ್ಯೆಗಳಿಗೆ ತುತ್ತಾಗಿದ್ದರು. ತಮಗೆ ವಿಶೇಷ ಆರ್ಥಿಕ ಪ್ಯಾಕೇಜ್​ ನೀಡುವಂತೆ ಮಹಿಳೆಯರು ವಿವಿಧ ಸಂಘಟನೆಗಳ ಬೆಂಬಲದ ಮೇಲೆ ಪ್ರತಿಭಟನೆ ನಡೆಸಿದ್ದರು.ಏಪ್ರಿಲ್​ 25 ರಂದು ರಾಣೆಬೆನ್ನೂರಿಂದ ಪಾದಯಾತ್ರೆ ಆರಂಭಿಸಿದ್ದರು.

ಹಾವೇರಿ ಬಳಿ ಪಾದಯಾತ್ರೆ ತಡೆದ ಜಿಲ್ಲಾಡಳಿತ ಮಹಿಳೆಯರಿಗೆ ವಿಶೇಷ ಪ್ಯಾಕೇಜ್ ನೀಡುವ ಭರವಸೆ ನೀಡಿತ್ತು. ಅಲ್ಲದೇ ಮಹಿಳೆಯರನ್ನ ಸಿಎಂ ಹತ್ತಿರ ಕರೆದುಕೊಂಡು ಹೋಗಿ ಸಮಸ್ಯೆಯ ತೀವ್ರತೆ ತಿಳಿಸಿತ್ತು. ಆದರೆ ಜಿಲ್ಲಾಡಳಿತ ಸಿಎಂ ಭರವಸೆ ಭರವಸೆಯಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಈ ಮಹಿಳೆಯರು ಆಕ್ಟೋಬರ್ 17 ರಂದು ತಾವು ಈ ಹಿಂದೆ ಪಾದಯಾತ್ರೆ ನಿಲ್ಲಿಸಿದ್ದ ಸ್ಥಳದಿಂದಲೇ ಸಿಎಂ ಮನೆಯವರೆಗೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ