Breaking News

ಚೌತಿ ಮೆರವಣಿಗೆ ವೇಳೆ ಮಸೀದಿ ಆವರಣಕ್ಕೆ ಬಣ್ಣ ಎರಚಿದ ಯೋಧ; ಸೈನಿಕನ ಬಂಧನ, ಪ್ರಕರಣ ದಾಖಲು..

Spread the love

ಬಾಗಲಕೋಟೆ: ಚತುರ್ಥಿ ಪ್ರಯುಕ್ತ ಗಣೇಶ ಮೂರ್ತಿ ಪ್ರತಿಷ್ಠಾಪನಾ ಮೆರವಣೆಗೆ ಸಂದರ್ಭದಲ್ಲಿ ಯೋಧನೊಬ್ಬ ಮಸೀದಿಯೊಂದರ ಆವರಣಕ್ಕೆ ಬಣ್ಣ ಎರಚಿದ್ದು, ಪೊಲೀಸರು ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

 

ಆನಂದ ಕುದುರಿಕಾರ ಬಂಧಿತ ಯೋಧ. ಈತ ಮರಾಠಾ ಲೈನ್ ಇನ್​ಫ್ಯಾಂಟ್ರಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆ ಮೇಲೆ ಊರಿಗೆ ಬಂದಿದ್ದಾಗ ಈ ಕೃತ್ಯವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬಾಗಲಕೋಟೆ ಪೊಲೀಸರು ಸೈನಿಕನನ್ನು ಬಂಧಿಸಿದ್ದಾರೆ.

ಬಾಗಲಕೋಟೆ ನಗರದ ಕಿಲ್ಲಾ ಓಣಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಲುವಾಗಿ ನಿನ್ನೆ ಈ ಮೆರವಣಿಗೆ ನಡೆದಿದ್ದು, ಯೋಧ ಆನಂದ ಕೂಡ ಪಾಲ್ಗೊಂಡಿದ್ದ. ಈ ಸಂದರ್ಭದಲ್ಲಿ ಬಾಗಲಕೋಟೆ ಪಂಕಾ ಮಸೀದಿ ಆವರಣಕ್ಕೆ ಬಣ್ಣ ಎರಚಿದ್ದ.


Spread the love

About Laxminews 24x7

Check Also

ಅಧ್ಯಯನ ಮತ್ತು ಆತ್ಮಸ್ಥೈರ್ಯ ಯಶಸ್ಸಿನ ಮಂತ್ರ: ಕಟಗಿಹಳ್ಳಿಮಠ

Spread the loveಬಾಗಲಕೋಟೆ : ಕಲೆ ಇದ್ದಲ್ಲಿ ವಿಕಾಸ ಇರುತ್ತದೆ. ಸರ್ವವ್ಯಾಪಿಯಾದ ಕಲಾ ಕೌಶಲ್ಯದ ಜೊತೆಗೆ ಸೃಜನಶೀಲತೆ, ಜ್ಞಾನ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ