500 ರೂಪಾಯಿ ಮುಖ ಬೆಲೆಯ ನಕಲಿ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಮೂವರು ಖತರ್ನಾಕ್ ಆರೋಪಿಗಳನ್ನು ಬಂಧಿಸುವಲ್ಲಿ ಗೋಕಾಕ್ ತಾಲೂಕಿನ ಘಟಪ್ರಭಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟಪ್ರಭಾದ ಬಾರ್ ನಲ್ಲಿ ಮಂದ ಬೆಳಕಿನಲ್ಲಿ ಕ್ಯಾಷಿಯ್ ಗೆ ಈ ನಕಲಿ ನೋಟುಗಳನ್ನು ಕೊಡಲು ಆರೋಪಿಗಳು ಮುಂದಾಗಿದ್ದರು. 500 ರೂಪಾಯಿ ಮುಖಬೆಲೆಯ ಈ ನೋಟುಗಳ ಮೇಲೆ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಅಂತಾ ಇತ್ತು.
ಈ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಇದೀಗ ನಕಲಿ ನೋಟು ಬಳಕೆಗೆ ಯತ್ನಿಸುತ್ತಿದ್ದ ಮೂವರನ್ನು ಘಟಪ್ರಭಾ ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರಿಂದ 473 ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್.ಪಿ. ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಮುಂದಿನ ತನಿಖೆಯನ್ನು ಘಟಪ್ರಭಾ ಪೊಲೀಸರು ಕೈಗೊಂಡಿದ್ದಾರೆ.
Laxmi News 24×7