Breaking News
Home / Uncategorized / ಕರುನಾಡ ವೀರ ರಾಣಿಯರು ದಾಸ್ಯಮುಕ್ತಿಗಾಗಿ ಹೋರಾಡಿದ ಧೀರೋದಾತ್ತ ಪರಂಪರೆ

ಕರುನಾಡ ವೀರ ರಾಣಿಯರು ದಾಸ್ಯಮುಕ್ತಿಗಾಗಿ ಹೋರಾಡಿದ ಧೀರೋದಾತ್ತ ಪರಂಪರೆ

Spread the love

ಕರುನಾಡಿನ, ಕಿತ್ತೂರು ಮತ್ತು ಉಳ್ಳಾಲದ ರಾಣಿಯರಿಬ್ಬರೂ ಆಳಿದ್ದು ಸಣ್ಣ ಸಣ್ಣ ಪ್ರಾಂತ್ಯಗಳೇ. ಆದರೆ, ಚೆನ್ನಮ್ಮ ಮತ್ತು ಅಬ್ಬಕ್ಕನ ಹೋರಾಟ ಮುಂದೆ ದೇಶ ದಾಸ್ಯದಿಂದ ಮುಕ್ತಿ ಹೊಂದಲು ಪ್ರೇರಣೆಯಾಯ್ತು.

ಬ್ರಿಟಿಷರ ವಿರುದ್ಧ ಸಿಡಿದೆದ್ದ ದೇಶದ ಮೊದಲ ವೀರ ನಾರಿ ಚೆನ್ನಮ್ಮ, ಸ್ವಾತಂತ್ರ್ಯ-ಸ್ವಾಭಿಮಾನದ ಪ್ರತಿರೂಪ. ಕಾಕತಿಯ ದೇಸಾಯಿ ದೂಳಪ್ಪಗೌಡ-ಪದ್ಮಾವತಿಯವರ ಏಕಮಾತ್ರ ಪುತ್ರಿ. 1782ರಲ್ಲಿ ಪಟ್ಟಕ್ಕೇರಿದ್ದ ಕಿತ್ತೂರಿನ ಮಲ್ಲಸರ್ಜನ, ಚೆನ್ನಮ್ಮ ಅವರ ಕೈಹಿಡಿದರು. 1816ರಲ್ಲಿ ಮಲ್ಲಸರ್ಜನ ಕಾಲವಾದ ತರುವಾಯ, ಹಿರಿಯ ದೇಸಾಯಿಣಿ ರುದ್ರಮ್ಮರ ಮಗ ಶಿವಲಿಂಗಸರ್ಜನ ಪಟ್ಟವೇರಿದರು. ಆದರೆ, ಇವರು ಅಕಾಲಿಕವಾಗಿ ಮೃತಪಟ್ಟರು. ಆಗಲೇ ದತ್ತಕ ವಿಷಯ ಬಂದಾಗ, ಕಂಪನಿ ಸರ್ಕಾರ ಒಪ್ಪಲಿಲ್ಲ.

ಅವತ್ತು 1824ರ ಅಕ್ಟೋಬರ್‌ 23. ಕಿತ್ತೂರಿನ ಕೋಟೆ ಬಾಗಿಲು ತೆರೆಯದಿದ್ದಾಗ, ಧಾರವಾಡದ ಬ್ರಿಟಿಷ್‌ ಕಲೆಕ್ಟರ್ ಥ್ಯಾಕರೇ, ಚೆನ್ನಮ್ಮರ ಮೇಲೆ ಯುದ್ಧ ಸಾರಿದ. ಇದರಿಂದ ಕುಗ್ಗದ ಚೆನ್ನಮ್ಮ, ಬಂಟ ರಾಯಣ್ಣ, ಅಮಟೂರು ಬಾಳಪ್ಪನ ಜತೆ ಸೇರಿ ಯುದ್ಧ ಮಾಡಿದರು. ವಿಜಯದಶಮಿ ದಿನವೇ ಥ್ಯಾಕರೇ ರುಂಡ ಚೆಂಡಾಡಲಾಯ್ತು. ಅದೇ ನೆನಪಿಗಾಗೇ ಪ್ರತಿವರ್ಷ ಅಕ್ಟೋಬರ್‌ 23ಕ್ಕೆ ಕಿತ್ತೂರು ಉತ್ಸವ ನಡೆಯುತ್ತದೆ. ಆದರೆ, 2ನೇ ಯುದ್ಧದಲ್ಲಿ ಚೆನ್ನಮ್ಮ ಸೋತು ಆಂಗ್ಲರಿಗೆ ಸೆರೆಯಾದರು. ಧೀರ ರಾಯಣ್ಣ ಗೆರಿಲ್ಲ ತಂತ್ರದಿಂದ ಬ್ರಿಟಿಷರನ್ನು ಹಿಮ್ಮೆಟ್ಟಿಸಲು ಹೋರಾಡಿದನಾದ್ರೂ ಅದು ಸಾಧ್ಯವಾಗಲಿಲ್ಲ. ರಾಯಣ್ಣನ ಅತ್ತ ಗಲ್ಲಿಗೇರಿದ್ರೇ, ಇತ್ತ ತಾಯಿ ಚೆನ್ನಮ್ಮ 1829 ಫೆಬ್ರವರಿ 2ರಂದು ಬೈಲಹೊಂಗಲದ ಕಾರಾಗೃಹದಲ್ಲಿ ಉಸಿರು ಚೆಲ್ಲಿದರು.


Spread the love

About Laxminews 24x7

Check Also

ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದೂ ಅಪರಾಧವಾಗಿತ್ತು:ಮೋದಿ

Spread the love ಜೈಪುರ(ಮಾ.23): ಲೋಕಸಭೆ ಚುನಾವಣೆಗೂ ಮುನ್ನ ನಾಯಕರು ದೇಶಾದ್ಯಂತ ನಿರಂತರವಾಗಿ ಪ್ರವಾಸ ಮಾಡುತ್ತಿದ್ದರೆ, ಪ್ರಧಾನಿ ಮೋದಿ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ