Breaking News

ಹೇಗಾದ್ರೂ ಮಾಡಿ ಜೈಲಿನಿಂದ ನನ್ನ ಹೊರಗಡೆ ಕರೆತನ್ನಿ ಅಮೃತ್ ಪೌಲ್ ರಂಪಾಟ

Spread the love

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪೌಲ್ ಖಿನ್ನತೆಗೆ ಒಳಗಾಗಿ ಜೈಲಿನಲ್ಲಿ ರಂಪಾಟ ಮಾಡುತ್ತಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವ ಪೌಲ್ ಅವರು ನಾನು ಹಿರಿಯ ಅಧಿಕಾರಗಳನ್ನು ನಂಬಿ ಮೋಸ ಹೋದೆ ಶಾಂತಕುಮಾರ್ ನಂಬಿ ನನ್ನ ಲೈಫ್ ಹಾಳಾಯ್ತು.

ಹೇಗಾದ್ರೂ ಮಾಡಿ ಜೈಲಿನಿಂದ ನನ್ನ ಹೊರಗಡೆ ಕರೆತನ್ನಿ ಎಂದು ಕುಟುಂಬಸ್ಥರ ಬಳಿ ಗೋಗರೆಯುತ್ತಿದ್ದಾರೆ.

ಇನ್ನೂ ಅಮೃತ್ ಪೌಲ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತ್ಯೇಕ ಕೊಠಡಿ ನೀಡಿದ್ದು, ಪೌಲ್ ನೋಡಿಕೊಳ್ಳಲು ಒಬ್ಬ ಸಿಬ್ಬಂದಿ ನೇಮಕ ಮಾಡಲಾಗಿದೆ. ಬಂಧನದಿಂದ ಖಿನ್ನತೆಗೆ ಒಳಗಾಗಿರುವ ಪೌಲ್, ಯಾರ ಬಳಿಯು ಮಾತನಾಡದೇ ಕೊಠಡಿಯಲ್ಲಿ ಕಿರುಚುತ್ತಿದ್ದು, ಕಂಬಿಗಳ ಹಿಂದೆ ಬಂದು ತಲೆಕೆಟ್ಟಂತೆ ಆಡುತ್ತಿರುವ ಪೌಲ್ ಗೆ ನಿಮ್ಹಾನ್ಸ್ ನಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಚಿಕಿತ್ಸೆ ಬಳಿಕ ಮತ್ತೆ ಜೈಲಿಗೆ ಕರೆದೊಯ್ಯಲಾಗುತ್ತದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ