Breaking News

116 ಕೆ.ಜಿ ಗೋಧಿ ಮೂಟೆ ಹೊತ್ತು 9 ಕಿ.ಮೀ ದೂರ ನಡೆದು ಸಾಹಸ ಮೆರೆದಿದ್ದಾನೆ.

Spread the love

ವಿಜಯಪುರ: ಇತ ರೀಲ್ ಬಾಹುಬಲಿ ಅಲ್ಲ, ರಿಯಲ್ ಬಾಹುಬಲಿ. 116 ಕೆ.ಜಿ ಗೋಧಿ ಮೂಟೆ ಹೊತ್ತು 9 ಕಿ.ಮೀ ನಡೆದುಕೊಂಡು ಹೋಗಿ ಸಾಹಸ ಮೆರೆದಿದ್ದಾನೆ.‌ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿ ಚಿಕ್ಕರೋಗಿ ಗ್ರಾಮದ ಪ್ರಕಾಶ ಬೈರವಾಡಗಿ ಈ ಸಾಧನೆ ಮಾಡಿದ ಯುವಕ.

ದೇವರಹಿಪ್ಪರಗಿ ತಾಲೂಕಿನ ಮುಳ ಸಾವಳಗಿ ಕ್ರಾಸ್​​ನಿಂದ ಚಿಕ್ಕರೂಗಿ ಗ್ರಾಮದವರೆಗೆ ಗೋಧಿ ಮೂಟೆ ಹೊತ್ತು ನಡೆದ ಯುವಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಇವರ ಸಾಧನೆಗೆ ಸ್ನೇಹಿತರು ದಾರಿ ಉದ್ಧಕ್ಕೂ ಟವೆಲ್​​ನಿಂದ ಗಾಳಿ ಬೀಸಿ ಸಾಥ್​ ನೀಡಿದ್ದಾರೆ. ಅಲ್ಲದೇ ಹಲಗೆ, ತಮಟೆ ಬಾರಿಸುತ್ತಾ ಹುರಿದುಂಬಿದ್ದಾರೆ.‌ ಬಳಿಕ ಸಾಧನೆ ಮಾಡಿದ ಪ್ರಕಾಶ್​​ಗೆ 50 ಗ್ರಾಂ ಬೆಳ್ಳಿ ಕಡಗವನ್ನು ಆತನ ಗೆಳೆಯರು ಕೈಗೆ ಹಾಕಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ