Breaking News

ಸಿದ್ದರಾಮಯ್ಯ ಜನ್ಮದಿನಕ್ಕೆ ಹೊರಟಿದ್ದ ವಾಹನ ಅಪಘಾತ: ಒಬ್ಬ ಸಾವು

Spread the love

ಬಾಗಲಕೋಟೆ : ಜಿಲ್ಲೆಯ ಹೂಲಗೇರಿ ಕ್ರಾಸ್ ಬಳಿ ಸಿದ್ದರಾಮಯ್ಯ ಅವರ‌ ಜನ್ಮ ದಿನಕ್ಕೆ ಹೊರಟಿದ್ದ ಕ್ರೂಷರ್, ಹಾಲಿನ ವಾಹನಕ್ಕೆ ಡಿಕ್ಕಿ ಹೊಡೆದು ಒಬ್ಬರು ಮೃತರಾಗಿದ್ದಾರೆ.

ಜಿಲ್ಲೆಯ ಮುಧೋಳ ತಾಲ್ಲೂಕಿನ ಹಿರೇಆಲಗುಂಡಿ ಬಿ.ಕೆ. ಹಾಗೂ ಚಿಕ್ಕ ಆಲಗುಂಡಿ ಗ್ರಾಮದವರು.

ಮಂಗಳವಾರ ಸಂಜೆ ವಾಹನ ಗ್ರಾಮದಿಂದ ಹೊರಟಿತ್ತು.

ಚಿಕ್ಕ ಆಲಗುಂಡಿಯ ಪ್ರಕಾಶ ಬಡಿಗೇರ ಎಂಬುವವರು‌ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಐವರನ್ನು ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಜಿಲ್ಲಾ ಆಸ್ಪತ್ರೆಗೆ ಮಲ್ಲಪ್ಪ ಚಿಚಖಂಡಿ, ಮಂಜುನಾಥ ಚಿಚಖಂಡಿ, ಆನಂದ ಮುತ್ತಪ್ಪನವರ ಅವರನ್ನು ದಾಖಲಿಸಲಾಗಿದ್ದು, ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.


Spread the love

About Laxminews 24x7

Check Also

ಬಸವೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ : ಶೇ.88.10%

Spread the loveಬಾಗಲಕೋಟೆ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಮಹಾವಿದ್ಯಾಲಯದ ಕುಮಾರ ಮಂಥನ ಮಹಾವೀರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ