Breaking News

ಸೆ. 2ಕ್ಕೆ ಲಕ್ಕಿಮ್ಯಾನ್​; ದೇವರಾದ ಪುನೀತ್ ರಾಜಕುಮಾರ್

Spread the love

ಬೆಂಗಳೂರು: ಪುನೀತ್ ಅಭಿನಯದ ಕೊನೆಯ ಚಿತ್ರ ‘ಗಂಧದ ಗುಡಿ’, ಅ. 28ಕ್ಕೆ ಬಿಡುಗಡೆಯಾಗಲಿದೆ ಎಂದು ಇತ್ತೀಚೆಗಷ್ಟೇ ಘೋಷಣೆಯಾಗಿತ್ತು. ಈಗ ಪುನೀತ್ ಅಭಿನಯದ ಇನ್ನೊಂದು ಚಿತ್ರದ ಬಿಡುಗಡೆ ಬಹುತೇಕ ಪಕ್ಕಾ ಆದಂತಿದೆ. ಅದೇ ‘ಲಕ್ಕಿ ಮ್ಯಾನ್’.

ಪ್ರಭುದೇವ ಸಹೋದರ ‘ಚಿತ್ರ’ ಖ್ಯಾತಿಯ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರವು ಆಗಸ್ಟ್​ನಲ್ಲಿ ಬಿಡುಗಡೆಯಾಗಲಿದೆ ಎಂದು ಮೊದಲು ಹೇಳಲಾಗಿತ್ತು. ಮೂಲಗಳ ಪ್ರಕಾರ, ಸೆ. 02ರಂದು ‘ಲಕ್ಕಿ ಮ್ಯಾನ್’ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

‘ಲಕ್ಕಿ ಮ್ಯಾನ್’, ತಮಿಳಿನ ‘ಓ ಮೈ ಕಡುವುಳೇ’ ಚಿತ್ರದ ರೀಮೇಕ್. ‘ಡಾರ್ಲಿಂಗ್’ ಕೃಷ್ಣ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಪುನೀತ್ ಅತಿಥಿ ಪಾತ್ರದಲ್ಲಿ ನಟಿಸಿದ್ದು, ದೇವರಾಗಿ ಕಾಣಿಸಿಕೊಂಡಿರುವುದು ವಿಶೇಷ. ಈ ಚಿತ್ರದಲ್ಲಿ ಅವರಿಗೆ ಒಂದು ಹಾಡು ಸಹ ಇದ್ದು, ಪ್ರಭುದೇವ ಜತೆಗೆ ಪುನೀತ್ ಹೆಜ್ಜೆ ಹಾಕಿದ್ದಾರೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿದೆ.

ಇತ್ತೀಚೆಗಷ್ಟೇ ‘ಲಕ್ಕಿ ಮ್ಯಾನ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ, ಕೃಷ್ಣಗೆ ನಾಯಕಿಯರಾಗಿ ಸಂಗೀತಾ ಶೃಂಗೇರಿ ಮತ್ತು ರೋಷನಿ ಪ್ರಕಾಶ್ ನಟಿಸಿದ್ದು, ಮಿಕ್ಕಂತೆ ರಂಗಾಯಣ ರಘು, ಸಾಧು ಕೋಕಿಲ, ಸುಧಾ ಬೆಳವಾಡಿ, ನಾಗಭೂಷಣ್ ಮುಂತಾದವರು ನಟಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ