Breaking News

ಉತ್ತರ ಕರ್ನಾಟಕದಲ್ಲಿ ಡಿ.6ರಿಂದ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ

Spread the love

ಬೆಳಗಾವಿ: ಬೆಳಗಾವಿ ಸೇನಾ ನೇಮಕಾತಿ ವಿಭಾಗದಿಂದ ಉತ್ತರ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ ಡಿಸೆಂಬರ್ 5ರಿಂದ 22ರ ವರೆಗೆ ಬೀದರ್​ನ ನೆಹರು ಕ್ರೀಡಾಂಗಣದಲ್ಲಿ ‘ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ ನಡೆಯಲಿದೆ.

2022ರ ಡಿಸೆಂಬರ್ 5ರಿಂದ ಆರಂಭವಾಗಲಿರುವ ಅಗ್ನಿಪಥ್​ ಸೇನಾ ನೇಮಕಾತಿಯಲ್ಲಿ ಬೆಳಗಾವಿ, ಬೀದರ್​, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳ ಆಸಕ್ತರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಆ.3ರಿಂದ ಸೆ.3ರ ವರೆಗೆ ಆನ್‌ಲೈನ್ ರಿಜಿಸ್ಟ್ರೇಶನ್ ನಡೆಯಲಿದೆ.

ಅಗ್ನಿವೀರ್ ಟೆಕ್ನಕಲ್, 10ನೇ ತರಗತಿ ಪಾಸ್ ಆದವರಿಗೆ ಅಗ್ನಿವೀರ್ ಟ್ರೇಡ್ಸ್​ಮನ್, 8ನೇ ತರಗತಿ ಪಾಸ್ ಆದವರಿಗೆ ಅಗ್ನಿವೀರ್ ಟ್ರೇಡ್ಸ್‌ಮನ್, ಅಗ್ನಿವೀರ್ ಕ್ಲರ್ಕ್, ಅಗ್ನಿವೀರ್ ಸ್ಟೋರ್ ಕೀಪರ್ಸ್, ಅಗ್ನಿವೀರ್ ಟೆಕ್ನಿಕಲ್ ಕೆಟಗರಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ