Home / ರಾಜಕೀಯ / ಎರಡನೇ ಬಿಗ್ ಬಾಸ್ ಆವೃತ್ತಿಯಲ್ಲಿ ಸ್ಪರ್ಧಿಸಿದ್ದ ನಟ ಸಂತೋಷ್ ಕುಮಾರಗೆ ಸಿಸಿಬಿ ನೋಟಿಸ್

ಎರಡನೇ ಬಿಗ್ ಬಾಸ್ ಆವೃತ್ತಿಯಲ್ಲಿ ಸ್ಪರ್ಧಿಸಿದ್ದ ನಟ ಸಂತೋಷ್ ಕುಮಾರಗೆ ಸಿಸಿಬಿ ನೋಟಿಸ್

Spread the love

ಬೆಂಗಳೂರು: ಸಿಸಿಬಿ ಪೊಲೀಸರು ವಾಟ್ಸಾಪ್ ಮೂಲಕ ನನಗೆ ನೋಟಿಸ್ ನೀಡಿದ್ದು, ನಾಳೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಎರಡನೇ ಬಿಗ್ ಬಾಸ್ ಆವೃತ್ತಿಯಲ್ಲಿ ಸ್ಪರ್ಧಿಸಿದ್ದ ನಟ ಸಂತೋಷ್ ಕುಮಾರ್ ಸ್ಪಷ್ಟಪಡಿಮಾತನಾಡಿದ ಅವರು, ನನಗೆ ಯಾವ ಕಾರಣಕ್ಕೆ ನೋಟಿಸ್ ನೀಡಿದ್ದಾರೆ ಎಂಬುದು ನನಗೂ ಕುತೂಹಲ ಇದೆ. ಒಬ್ಬ ಪ್ರಜೆಯಾಗಿ ವಿಚಾರಣೆಗೆ ಹಾಜರಾಗುವುದು ನನ್ನ ಕರ್ತವ್ಯ ಆದ್ದರಿಂದ ಹೋಗುತ್ತೇನೆ. ಅಮ್ಮನ ಕಾರ್ಯದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದೇನೆ. ನಾಳೆ ಬೆಂಗಳೂರಿಗೆ ವಾಪಸ್ ಆಗುತ್ತೇನೆ. ನೋಟಿಸ್ ನೀಡಿದ ಸಂದರ್ಭದಲ್ಲಿ ಇಂದು ಸಂಜೆಯೇ ಬರುತ್ತೇನೆ ಎಂದು ಪೊಲೀಸರಲ್ಲಿ ಕೇಳಿದ್ದೆ. ಆದರೆ ಅವರು ನಾಳೆಯೇ ಬನ್ನಿ ಎಂದಿದ್ದಾರೆ ಎಂದು ತಿಳಿಸಿದರು.ಸಿದ್ದಾರೆ..

ನನ್ನದು ಒಂದು ವಿಲ್ಲಾ ಇತ್ತು. ಆದರೆ ಜನವರಿಯಲ್ಲಿ ನಾನು ಅದನ್ನು ಖಾಲಿ ಮಾಡಿದ್ದೆ. ಅಲ್ಲಿ ಹುಟ್ಟಹಬ್ಬ ಕಾರ್ಯಕ್ರಮ ಸೇರಿದಂತೆ ಕೆಲ ಪಾರ್ಟಿಗಳಿಗೆ ಬಾಡಿಗೆ ನೀಡುತ್ತಿದ್ದೇವು. ಈ ಕುರಿತ ಮಾಹಿತಿ ಪಡೆಯಲು ವಿಚಾರಣೆಗೆ ಕರೆದಿರಬಹುದು. ಲಾಕ್‍ಡೌನ್ ಸಮಯದಲ್ಲಿ ನಾನು ಯಾವುದೇ ಪಾರ್ಟಿಗೆ ಭಾಗಿಯಾಗಿಲ್ಲ. ಏಕೆಂದರೆ ನಾನು ಕೋವಿಡ್ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದೆ. ಸುಮಾರು 35 ದಿನಗಳ ಕಾಲ 20 ಸಾವಿರಕ್ಕೂ ಹೆಚ್ಚು ಊಟವನ್ನು ವಿತರಣೆ ಮಾಡಿದ್ದೇವೆ.

ಆದರೆ ಲಾಕ್‍ಡೌನ್ ಸಮಯದಲ್ಲೇ ನಗರದ ಹೊರವಲಯದಲ್ಲಿ ಪಾರ್ಟಿಗಳು ನಡೆಯುತ್ತಿದ್ದ ಮಾಹಿತಿ ನನಗೂ ತಿಳಿದಿದೆ. ಆದರೆ ಯಾರೂ ಆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರೂ ಎಂಬ ಬಗ್ಗೆ ಮಾಹಿತಿ ಇಲ್ಲ. ನಟಿಯೊಬ್ಬರ ಅಪಘಾತ ಆದ ಸಂದರ್ಭದಲ್ಲಿ ನನಗೆ ಆಚ್ಚರಿ ಆಗಿತ್ತು. ಪಾರ್ಟಿಗಳಲ್ಲಿ ಆಫ್ಟರ್ ಪಾರ್ಟಿ ನಡೆಯುತ್ತದೆ ಎಂಬುವುದು ಎಲ್ಲರಿಗೂ ತಿಳಿದಿದೆ. ನಾವು ಕೆಲ ಪಾರ್ಟಿಗಳಿಗೆ ಹೋಗಿದ್ದು, ಆದರೆ ಆಫ್ಟರ್ ಪಾರ್ಟಿಗಳಲ್ಲಿ ಭಾಗಿಯಾಗಿಲ್ಲ. ಮುಂಜಾನೆ 6 ಗಂಟೆವರೆಗೂ ಪಾರ್ಟಿ ನಡೆಸಿರುವ ಸಂದರ್ಭಗಳಿದ್ದೂ, ಆಫ್ಟರ್ ಪಾರ್ಟಿಗೆ ಪ್ರತ್ಯೇಕ ಆಹ್ವಾನ ಇರುತ್ತೆ. ಈ ಪಾರ್ಟಿಗಳಿಗೆ ಬೇಕಾದಷ್ಟು ಹಣ ಖರ್ಚು ಮಾಡುತ್ತಾರೆ ಎಂದು ವಿವರಿಸಿದರು.

ಸದ್ಯ ನಾವು ಇಂದ್ರಜಿತ್ ಅವರಿಗೆ ಧನ್ಯವಾದ ಹೇಳಬೇಕು. ಅವರು ಕೆಲಸ ಮಾಡುತ್ತಿದ್ದಾರೆ. ಆದರೆ ಸಿನಿಮಾ ಮಾತ್ರವಲ್ಲದೇ ಎಲ್ಲಾ ರಂಗದಲ್ಲಿಯೂ ಡ್ರಗ್ಸ್ ಮಾಫಿಯಾ ಹರಡಿಕೊಂಡಿದೆ. ನಮ್ಮ ತಂದೆ-ತಾಯಿ ಮಾಡಿದ ಪುಣ್ಯದಿಂದ ನಾವು ಅಂತಹ ಪಾರ್ಟಿಗಳಿಗೆ ಹೋಗಿಲ್ಲ. ನಾನು ಈಗ ಪ್ರೇಕ್ಷಕರ ಎದುರು ಬರಲು ಅತ್ಯುತ್ತಮ ಪಾತ್ರವೊಂದರ ಹುಡುಕಾಟದಲ್ಲಿದ್ದೇನೆ. ಸ್ಯಾಂಡಲ್‍ವುಡ್ ಕೋವಿಡ್ ವಾರಿಯರ್ಸ್ ಎಂಬ ಗ್ರೂಪ್ ಮಾಡಿಕೊಂಡಿದ್ದು, ಊಟ, ಹಣ್ಣು, ತರಕಾರಿ, ಮಾಸ್ಕ್ ಸೇರಿದಂತೆ ಅಗತ್ಯ ಸೇವೆಗಳನ್ನು ನೀಡುವ ಕಾರ್ಯವನ್ನು ಲಾಕ್‍ಡೌನ್ ಸಮಯದಲ್ಲಿ ಮಾಡಿದ್ದೇವೆ. ನಾವು ದೊಡ್ಡ ತಂಡ ಕಟ್ಟಿಕೊಂಡು ಹಲವರ ನೆರವು ಪಡೆದುಕೊಂಡು ಸಹಾಯ ಮಾಡಿದ್ದೇವೆ

 


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ