Breaking News

ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಯುವಕರಿಬ್ಬರ ಕುತ್ತಿಗೆ ಭಾಗದ ಮೇಲೆ ಬ್ಲೇಡ್‌ನಿಂದ ಹಲ್ಲೆ

Spread the love

ಸಂಕೇಶ್ವರ : ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ, ವ್ಯಕ್ತಿಯೊಬ್ಬ ಯುವಕರಿಬ್ಬರ ಕುತ್ತಿಗೆ ಭಾಗದ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

 

ಇಲ್ಲಿನ ವಡ್ಡರ ಓಣಿಯ ನಿವಾಸಿಗಳಾದ ಸಂತೋಷ ವಡ್ಡರ ಹಾಗೂ ಇವರ ಸಹೋದರ ಲಕ್ಷ್ಮಣ ವಡ್ಡರ ಗಾಯಗೊಂಡವರು. ಆರೋಪಿ ದಿಲೀಪ್‌ ಎಂಬಾತ ಚಪ್ಪಲಿಯ ಚರ್ಮ ಕತ್ತರಿಸುವ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದಾನೆ. ಜೂಜಾಟವೇ ಗಲಾಟೆಗೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ದಿಲೀಪ್‌ಗೆ ಸಂತೋಷ ₹ 1,000 ಕೊಡಬೇಕಾಗಿತ್ತು. ಪದೇಪದೇ ಕೇಳಿದರೂ ಹಣ ಕೊಡದ ಕಾರಣ ಶುಕ್ರವಾರ ಇಬ್ಬರ ಮಧ್ಯೆ ಜಗಳ ಶುರುವಾಗಿತ್ತು. ಆಗ ದಿಲೀಪ ತನ್ನ ಬೇಜಿನಲ್ಲಿದ್ದ ಬ್ಲೇಡ್‌ ತೆಗೆದು ಸಂತೋಷ ಅವರ ಕುತ್ತಿಗೆ ಭಾಗದಲ್ಲಿ ಕೊಯ್ದ. ಸಂತೋಷ ಚೀರಾಟ ಕೇಳಿ ಅವರ ಕಿರಿಯ ಸಹೋದರ ಲಕ್ಷ್ಮಣ ನೆರವಿಗೆ ಓಡಿಬಂದರು. ಆಗ ಆರೋಪಿ ಲಕ್ಷ್ಮಣ ಮೇಲೂ ಬ್ಲೇಡ್‌ನಿಂದ ಹಲ್ಲೆ ಮಾಡಿದ ಎಂದು ತಿಳಿಸಲಾಗಿದೆ.

ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಯುವಕರನ್ನು ಜನರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ