Breaking News

ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ PSI ಬೇಬಿ : ACB ಬಲೆಗೆ ಬಿದ್ದು ವಿಲ ವಿಲ!

Spread the love

ಬೆಂಗಳೂರು : ಬಿಎಂಟಿಎಫ್ ಅಂದ್ರೆ ಬೆಂಗಳೂರು ಮೆಟ್ರೋ ಟಾಸ್ಕ್ ಫೋರ್ಸ್, ಇದರ ಕೆಲಸ ಬಿಬಿಎಂಪಿ ವ್ಯಾಪ್ತಿಯಲ್ಲಿರುವಂತ ಸರ್ಕಾರ ಸ್ವತ್ತುಗಳನ್ನ ಸಂರಕ್ಷಣೆ ಮಾಡುವ ಜವಾಬ್ದಾರಿ. ಆದ್ರೆ ಇಲ್ಲಿನ ಅಧಿಕಾರಿಗಳು ಅದನ್ನ‌ಮಾಡೋದನ್ನ ಬಿಟ್ಟು ಭೂ ಒತ್ತುವರಿ ದಾರರು ಸೇರಿದಂತೆ ಪಾಲಿಕೆ ಕಾರ್ಪೊರೇಟರ್ ಗಳ ಬಳಿಯೇ ಸುಲಿಗೆ ಮಾಡುವ ಹಂತಕ್ಕೆ ಇಳಿದಿದ್ದು BMTF ನ ಅಧಿಕಾರಿಯೊಬ್ಬರು ಗುರುವಾರ ಮಧ್ಯಾಹ್ನ ACB ಬಲೆಗೆ ಬಿದ್ದಿದ್ದಾರೆ.

 

ಬೇಲಿಯೇ ಎದ್ದು ಹೊಲ ಮೇಯ್ದಂತಾಯ್ತ BMTF ಕಥೆ

ಹೌದು BMTF ಎಲ್ಲಿದೆ ? ಹೇಗಿದೆ? ಇದರ ಕಾರ್ಯವ್ಯಾಪ್ತಿ ಏನು ? ಅನ್ನೋದು ಸಾಕಷ್ಟು ಜನರಿಗೆ ಗೊತ್ತೆ ಇಲ್ಲ. ACB ಟಾಸ್ಕ್ ಫೋರ್ಸ್, ಲೊಕಾಯುಕ್ತ, ವಿಜಿಲೆನ್ಸ್ ಯಾವರೀತಿ ಕೆಲಸ ಮಾಡುತ್ತೋ ಅದೇ ರೀತಿಯ ಕೆಲಸವನ್ನು BMTF ಮಾಡಬೇಕು. ಅದು ಕೂಡ ಬಿಬಿಎಂಪಿ ಅಧೀನದಲ್ಲಿರುವ ಅಂಗ ಸಂಸ್ಥೆ ಯಾಗಿದ್ದು ಪಾಲಿಕೆ ಆಸ್ತಿಗಳನ್ನ ಸಂರಕ್ಷಣೆ ಮಾಡುವ ಜವಾಬ್ದಾರಿ ಇದರದ್ದು. ಆದ್ರೆ ಅದನ್ನ ಮಾಡದೆ ಬಿಬಿಎಂಪಿಯ ಜನಪ್ರತಿನಿಧಿಗಳ ಬಳಿಯೇ ಸುಲಿಗೆ ಮಾಡಯವ ಮಟ್ಟಕ್ಕೆ BMTF ಇಳಿದಿದ್ದು BMTF ನ PSI ಬೇಬಿ ಓಲೆಕಾರ್ ACB ಅಧಿಕಾರಿಗಳ ಅತಿಥಿ ಆಗಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ