Breaking News

ಹೆಂಡತಿ ಶವ ಸೂಟ್​ಕೇಸ್​ನಲ್ಲಿ ತುಂಬಿ ಕೆರೆಗೆ ಎಸೆದ ಗಂಡ: ಇಬ್ಬರ ಬಂಧನ

Spread the love

ಬೆಂಗಳೂರು: ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನೇನಹಳ್ಳಿ ಕೆರೆಯಲ್ಲಿ ಇದೇ ತಿಂಗಳ 14ರಂದು ಸೂಟ್​ಕೇಸ್‌ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆ ಮೃತ ದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದಾಬಸ್‌ಪೇಟೆ ಪೊಲೀಸರು ತನಿಖೆ ನಡೆಸಿದ್ದಾರೆ. ಆಗ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವಾಸವಿದ್ದ 35 ವರ್ಷದ ಮಹಿಳೆ ಮಂಜುಳ ಮೃತದೇಹ ಎಂದು ತಿಳಿದು ಬಂದಿದೆ.

ಹೆಂಡತಿ ಶವವನ್ನು ಸೂಟ್​ಕೇಸ್​ನಲ್ಲಿ ತುಂಬಿ ಕೆರೆಗೆ ಎಸೆದ ಗಂಡ

ಕಳೆದ ಎರಡು ವರ್ಷದ ಹಿಂದೆ ಈಕೆಯನ್ನು ವರಿಸಿದ್ದ ಎರಡನೇ ಪತಿ ಆರೋಪಿ ರಾಮು ಕೊಲೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ರಾಮು ಜೊತೆಗೆ ಶವ ಸಾಗಣೆಗೆ ಸಹಕರಿಸಿದ್ದ ಬಸವಗೌಡನನ್ನೂ ಸಹ ದಾಬಸ್‌ಪೇಟೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಮೃತ ಮಂಜುಳ ಕಳೆದ 18 ವರ್ಷದ ಹಿಂದೆ‌ ಗಂಗಾವತಿ ಮೂಲದ ವಿರೂಪಾಕ್ಷನೊಂದಿಗೆ ಮದುವೆಯಾಗಿದ್ದರು. ವಿರೂಪಾಕ್ಷ ಮದ್ಯ ವ್ಯಸನಿಯಾಗಿದ್ದ, ಅಲ್ಲದೆ ಜೂಜಿಗೆ ದಾಸನಾಗಿದ್ದರಿಂದ ಇಬ್ಬರ ನಡುವೆ ಆಗಾಗ ಜಗಳವಾಗ್ತಿತ್ತು.

ಎರಡನೇ ಮದುವೆಯಾಗಿದ್ದ ಮಹಿಳೆ: ಮೊದಲ ಪತಿ ವಿರೂಪಾಕ್ಷನ ವರ್ತನೆಗೆ ಬೇಸತ್ತು ಆತನನ್ನು ತೊರೆದಿದ್ದಳು. ಹೀಗಾಗಿ ಪತಿ ವಿರೂಪಾಕ್ಷ ಸಹ ತನ್ನಿಬ್ಬರ ಮಕ್ಕಳನ್ನ ಕರೆದ್ಕೊಂಡು ಗಂಗಾವತಿಗೆ ವಾಪಸ್​ ಆಗಿದ್ದ. ಇದರ ನಡುವೆ ಒಂಟಿ‌ ಜೀವನ ನಡೆಸುತ್ತಿದ್ದ ಮೃತ ಮಂಜುಳಾ ಪೀಣ್ಯ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್​ವೊಂದರಲ್ಲಿ ಕೆಲಸ ಮಾಡ್ತಿದ್ದಳು. ಈ ವೇಳೆ, ಆರೋಪಿ ರಾಮು ಪರಿಚಯವಾಗಿ, ಪರಿಚಯ ಸ್ನೇಹವಾಗಿ ಪ್ರೀತಿಯಾಗಿ ನಂತ್ರ ಗೊರವನಹಳ್ಳಿ ಲಕ್ಷ್ಮಿ ದೇವಾಲಯದಲ್ಲಿ ಮದುವೆಯಾಗಿದ್ರು.

ಸಂಸಾರದಲ್ಲಿ ಏರುಪೇರು: ಕಳೆದ 2 ವರ್ಷಗಳಿಂದ ಜೊತೆಯಲ್ಲಿ ಸಂಸಾರ ನಡೆಸುತ್ತಿದ್ದರೂ, ಇಬ್ಬರ ವೈವಾಹಿಕ ಜೀವನದ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿಯೇ ಇರಲಿಲ್ವಂತೆ‌. ಇತ್ತೀಚೆಗೆ ಮೃತ ಮಹಿಳೆ ಹಾಗೂ ಆರೋಪಿ ನಡುವೆ ಸಂಸಾರದಲ್ಲಿ ಏರುಪೇರುಗಳಾಗ್ತಿತ್ತಂತೆ. ಕಾರಣ ಮೃತ ಮಂಜುಳ ಅತಿಯಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದಳಂತೆ. ಅಲ್ಲದೇ ಮನೆಯಲ್ಲಿ ಸರಿಯಾಗಿ ಅಡುಗೆ ಸಹ ಮಾಡದೇ ಅಸಡ್ಡೆಯಾಗಿ ವರ್ತಿಸುತ್ತಿದ್ಳಂತೆ.

ಆಯುಧದಿಂದ ತಲೆಗೆ ಹೊಡೆದಿದ್ದ ಪತಿ: ಈ ಹಿಂದೆ ಸಾಕಷ್ಟು ಬಾರಿ ಈ ವಿಷಯವಾಗಿ ಜಗಳ ನಡೆದಿತ್ತಂತೆ. ಆದರೆ ಇದೇ ತಿಂಗಳ 11ನೇ ತಾರೀಖಿನ ರಾತ್ರಿ ಸಿನಿಮಾ ನೋಡ್ಕೊಂಡು ಮನೆಗೆ ಬಂದ ಆರೋಪಿ ರಾಮು, ಮೃತ ಮಂಜುಳ ಬಾಗಿಲು ತೆಗೆಯಲು ತಡ ಮಾಡಿದಕ್ಕೆ ಮತ್ತು ಮನೆಯಲ್ಲಿ ಅಡುಗೆ ಸಹ ಮಾಡದೆ ಮಲಗಿದ್ದಳ್ಳಂತೆ. ಇದ್ರಿಂದ ಕೋಪಗೊಂಡಿದ್ದ ರಾಮು ಬಾಗಿಲನ್ನ ಕಾಲಿನಿಂದ ಒದ್ದು, ಉದ್ರಿಕ್ತನಾಗಿ ಅಲ್ಲೆ ಇದ್ದ ಬಲವಾದ ಆಯುಧದಿಂದ ಆಕೆಯ ತಲೆಗೆ ಹೊಡೆದು, ವೇಲಿನಿಂದ ಕುತ್ತಿಗೆ ಬಿಗಿದು ಜೀವ ತೆಗೆದಿದ್ದಾನೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ