Breaking News

ಕೊಳಗೇರಿ ನಿಗಮದಿಂದ ಶೀಘ್ರದಲ್ಲೇ ಮನೆಗಳ ನಿರ್ಮಾಣ: ಶಾಸಕ ಅ‌ನಿಲ ಬೆನಕೆ

Spread the love

ಬೆಳಗಾವಿ: ನಗರದಲ್ಲಿ ಇರುವ ಒಂಟಮೂರಿ ಹಾಗೂ ವೈಭವ ನಗರದ ಕೊಳಗೇರಿ ಪ್ರದೇಶಕ್ಕೆ ಶಾಸಕ ಅನಿಲ ಬೆನಕೆ, ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ ಹಾಗೂ ಕೊಳಗೇರಿ ನಿಗಮದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಮಾನಿ, ಈ ಪಣಿರಾಜ ಅವರು ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದರು.

ಶನಿವಾರ ಬೆಳ್ಳಂಬೆಳಗ್ಗೆ ಶಾಸಕ ಅನಿಲ ಬೆನಕೆ ಹಾಗೂ ಅಧಿಕಾರಿಗ ದಂಡು ಜನರ ಸಮಸ್ಯೆ ಆಲಿಸಲು ಒಂಟಮೂರಿ ಹಾಗೂ ವೈಭವ ನಗರದಲ್ಲಿ ಇರುವ ಕೊಳಗೇರಿಗೆ ಪ್ರದೇಶಕ್ಕೆ ಭೇಟಿ ನೀಡಿದರು. ಈ ವೇಳೆ ಅಲ್ಲಿನ ಜನರಿಗೆ ವಿವಿಧ ಸಮಸ್ಯೆ ಶೀಘ್ರದಲ್ಲೇ ನಿವಾರಣೆ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದರು.

ಈಗಾಗಲೇ ವೈಭವ ನಗರದಲ್ಲಿ ಕೊಳಗೇರಿ ಜನರಿಗೆ ನಿಗಮದಿಂದ ಮನೆಗಳ ನಿರ್ಮಾಣ ಮಾಡಿಕೊಡುವಾದಗಿ ಶಾಸಕ ಅನಿಲ ಬೆನಕೆ ಅವರು ಭರವಸೆ ನೀಡಿದರು. ಒಂಟಮೂರಿಯನ್ನು ಶೀಘ್ರದಲ್ಲೇ ಕೊಳಗೇರಿಕ ಪ್ರದೇಶ ಎಂದು ಘೋಷಿಸಿ ಅಲ್ಲಿಯು ಸಹ ಮನೆಗಳ ನಿರ್ಮಾಣ ಮಾಡಿ ಕೊಡುವುದಾಗಿ ಭರವಸೆ ನೀಡಿದರು. ಈ ವೇಳೆ ಶಾಸಕರು ಪೌರ ಕಾರ್ಮಿಕರಿಗೆ ಸ್ವಚ್ಚತೆ ಕಾಪಾಡಲು ಸಲಹೆ ನೀಡಿದರು.‌

ಈ ವೇಳೆ ನಗರ ಸೇವಕರಾದ ರಾಜಶೇಖರ ಡೋಣಿ, ಲಕ್ಷ್ಮಿ ರಾಠೋಡ, ಚಿಕ್ಕಲದ್ದಿನಿ ಶಾಸಕರಿಗೆ ಸಾಥ್ ನೀಡಿದರು‌.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ