Home / ಜಿಲ್ಲೆ / ಬಾಗಲಕೋಟೆ / ಮಕ್ಕಳಿಗೆ ಬರೆದ ಆಸ್ತಿ ತಂದೆ ಹೆಸರಿಗೆ ವಾಪಸ್! ವೃದ್ಧ ದಂಪತಿಗೆ ಆಸರೆಯಾಗದ ಮಕ್ಕಳಿಗೆ ಪಾಠ ಕಲಿಸಿದ ಉಪವಿಭಾಗಾಧಿಕಾರಿ!

ಮಕ್ಕಳಿಗೆ ಬರೆದ ಆಸ್ತಿ ತಂದೆ ಹೆಸರಿಗೆ ವಾಪಸ್! ವೃದ್ಧ ದಂಪತಿಗೆ ಆಸರೆಯಾಗದ ಮಕ್ಕಳಿಗೆ ಪಾಠ ಕಲಿಸಿದ ಉಪವಿಭಾಗಾಧಿಕಾರಿ!

Spread the love

ಬಾಗಲಕೋಟೆ: ತಂದೆಯೊಬ್ಬರು ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಇಬ್ಬರು ಮಕ್ಕಳ ಹೆಸರಿಗೆ ಬಿಟ್ಟುಕೊಟ್ಟಿದ್ದರು. ಆದರೆ, ಆ ಮಕ್ಕಳು ತಂದೆಯ ಜೀವನಕ್ಕೆ ಆರ್ಥಿಕವಾಗಿ ಅಥವಾ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿರಲಿಲ್ಲ. ತನ್ನ ಕೊನೇಗಾಲದಲ್ಲಿ ಮಕ್ಕಳು ಆಸರೆ ನೀಡುತ್ತಿಲ್ಲ ಎಂದು ನೊಂದ ತಂದೆ, ನನ್ನ ಸಾವಿನ ನಂತರ ಮಡದಿಯ ಜೀವನಕ್ಕೂ ಮಕ್ಕಳು ಸಹಾಯ ಕೊಡುತ್ತಾರೆ ಎಂಬ ಭರವಸೆ ಇಲ್ಲ.

ನಾನೇನು ಮಾಡಲಿ? ಇರೋ ಆಸ್ತಿಯನ್ನೂ ಮಕ್ಕಳಿಗೆ ಕೊಟ್ಟಿರುವೆ ಎಂದು ಕಣ್ಣೀರು ಹಾಕುತ್ತಿದ್ದರು. ಇವರ ಕಷ್ಟಕ್ಕೆ ಮರುಗಿದ ಮಹಿಳಾ ಅಧಿಕಾರಿಯೊಬ್ಬರು ಮಕ್ಕಳಿಂದ ತಂದೆ ಹೆಸರಿಗೆ ಆಸ್ತಿಯನ್ನು ಮರಳಿಸಿದ್ದಾರೆ!

ಹೌದು, ಇಂತಹ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಸಂಭವಿಸಿದ್ದು, ವೃದ್ಧ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ. ತನ್ನ ಜಮೀನನ್ನು ಇಬ್ಬರು ಮಕ್ಕಳ ಹೆಸರಿಗೆ ಬರೆದು ಕೊಟ್ಟಿದ್ದನ್ನು ಮರಳಿ ಅವರಿಗೇ ಹಕ್ಕು ಬದಲಾಯಿಸಿ ಪಾಲಕರ ಪೋಷಣೆ ಹಾಗೂ ಹಿರಿಯ ನಾಗರಿಕ ರಣಾ ಕಾಯ್ದೆಯಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಆದೇಶ ಹೊರಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ತಾಲೂಕಿನ ಹಂಗರಗಿ ಗ್ರಾಮದ ನಿವಾಸಿ ವೃದ್ಧ ಯಮನಪ್ಪ ಮಾದರ ಅವರು ಆಸ್ತಿ ವಿಷಯವಾಗಿ ನ್ಯಾಯ ಕೊಡಿಸುವಂತೆ ಪಾಲಕರ ಪೋಷಣೆ ರಣಾ ಕಾಯ್ದೆಯಡಿ ಮನವಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆಗೆ ಸಂಬಂಧಪಟ್ಟವರಿಗೆ ನೋಟಿಸ್​ ಜಾರಿ ಮಾಡಲಾಗಿತ್ತು. ಸದರಿ ಮನವಿದಾರರು ಅನೇಕ ವರ್ಷಗಳಿಂದ ಆನಾರೋಗ್ಯದಿಂದ ಬಳಲುತ್ತಿರುವುದಕ್ಕೆ, ವೈದ್ಯಕೀಯ ದಾಖಲೆಗಳನ್ನೂ ಹಾಜರುಪಡಿಸಿದ್ದರು.

ಮನವಿದಾರ ಯಮನಪ್ಪ ಮಾದರ ಅವರು ಈಗಾಗಲೇ ತಮ್ಮ ಇಬ್ಬರು ಮಕ್ಕಳಾದ ವಾಸುದೇವ ಮತ್ತು ನಿಜಗುಣಿ ಅವರಿಗೆ ತಮ್ಮ ಜಮೀನಿನ ಹಕ್ಕನ್ನು 1994ರಲ್ಲಿಯೇ ಬಿಟ್ಟು ಕೊಟ್ಟಿದ್ದರು. ಆದರೆ, ಆ ಮಕ್ಕಳು ತಂದೆಯ ಜೀವನಕ್ಕೆ ಆರ್ಥಿಕವಾಗಿ ಅಥವಾ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿರಲಿಲ್ಲ. ತನ್ನ ಕೊನೆಯಗಾಲದಲ್ಲಿ ಹಾಗೂ ತನ್ನ ನಂತರ ಮಡದಿಯ ಜೀವನ ಸಾಗಿಸಲು ಮಕ್ಕಳಿಂದ ಸೂಕ್ತ ಸಹಾಯ ದೊರೆಯುವುದಿಲ್ಲ ಎಂದು ಯಮನಪ್ಪ ಅಳಲು ತೋಡಿಕೊಂಡಿದ್ದರು.

ಈ ಕುರಿತು ಪಾಲಕರ ಪೋಷಣೆ ಸಂರಕ್ಷಣೆ ಹಾಗೂ ಹಿರಿಯ ನಾಗರಿಕ ರಕ್ಷಣಾ ನ್ಯಾಯ ಮಂಡಳಿಯಲ್ಲಿ ಸದರಿ ಮನವಿದಾರ ಮತ್ತು ಪ್ರತಿವಾದಿಗಳ ಹೇಳಿಕೆ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಗುಳೇದಗುಡ್ಡ ತಾಲೂಕಿನ ಹಂಗರಗಿ ಗ್ರಾಮದ ಜಮೀನನ್ನು ಯಮನಪ್ಪ ಅವರು ತನ್ನ ಇಬ್ಬರು ಗಂಡು ಮಕ್ಕಳಿಗೆ ಹಕ್ಕು ಬಿಟ್ಟಿರುವುದನ್ನು ರದ್ದು ಮಾಡಿ ಮರಳಿ ವೃದ್ಧ ದಂಪತಿ ಹೆಸರಿಗೆ ಹಕ್ಕು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ