Breaking News
Home / ರಾಜಕೀಯ / ಅಪ್​ಡೇಟ್​ ಆದ ಮತದಾರರ ಪಟ್ಟಿಯ ಹೆಸರು ಆನ್​ಲೈನ್​ನಲ್ಲಿ ಹುಡುಕುವುದು ಹೇಗೆ?

ಅಪ್​ಡೇಟ್​ ಆದ ಮತದಾರರ ಪಟ್ಟಿಯ ಹೆಸರು ಆನ್​ಲೈನ್​ನಲ್ಲಿ ಹುಡುಕುವುದು ಹೇಗೆ?

Spread the love

ಮತದಾರರ ಪಟ್ಟಿ ಅಪ್​ಡೇಟ್​ ಆದ ನಂತರ ಆನ್​ಲೈನ್​ ಮೂಲಕ ಹೆಸರು ಕಂಡುಹಿಡಿಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ಹಂತಹಂತವಾಗಿ ವಿವರಿಸಲಾಗಿದೆ.ಭಾರತ ಚುನಾವಣಾ ಆಯೋಗವು (Election Commission Of India) ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಲು ಮತದಾರರಿಗೆ ಆನ್‌ಲೈನ್ ಮತ್ತು ತಡೆರಹಿತ ಸೌಲಭ್ಯವನ್ನು ಒದಗಿಸುತ್ತದೆ.

ಹುಡುಕಾಟ ನಡೆಸಲು ಮೊದಲ ಹೆಸರು, ಕೊನೆಯ ಹೆಸರು, ವಿಧಾನಸಭಾ ಕ್ಷೇತ್ರ, ಲಿಂಗ ಇತ್ಯಾದಿ ವಿವರಗಳು ಅಗತ್ಯವಿದೆ. ಅದಕ್ಕೆ ಬದಲಾಗಿ, ಈ ಹುಡುಕಾಟವನ್ನು ನಡೆಸಲು EPIC ಸಂಖ್ಯೆಯನ್ನು ಸಹ ಬಳಸಬಹುದು. ಭಾರತ ಚುನಾವಣಾ ಆಯೋಗವು ತನ್ನ ಮತದಾರರ ಪಟ್ಟಿಯನ್ನು ನಿಯಮಿತವಾಗಿ ನವೀಕರಿಸುತ್ತದೆ. ಹಲವಾರು ಸಂದರ್ಭಗಳಲ್ಲಿ ಜನರು ತಮ್ಮ ವಿಳಾಸವನ್ನು ಬದಲಾಯಿಸುತ್ತಾರೆ, ಇತರ ಕ್ಷೇತ್ರಗಳಿಗೆ ತೆರಳುತ್ತಾರೆ. ಆದ್ದರಿಂದಾಗಿ ಚುನಾವಣೆ ಆಯೋಗವು ನಿಯತಕಾಲಿಕವಾಗಿ ಮತದಾರರ ಪಟ್ಟಿಯನ್ನು ನವೀಕರಿಸುತ್ತಿರುತ್ತದೆ. ನೀವು ಜಾಗೃತ ಮತದಾರರಾಗಿದ್ದಲ್ಲಿ ನಿಯಮಿತವಾಗಿ ಚುನಾವಣೆ ಆಯೋಗದ ವೆಬ್​ಸೈಟ್​ನಲ್ಲಿ ಹೆಸರನ್ನು ಪರಿಶೀಲಿಸಲು ಬಯಸುತ್ತೀರಿ.

ಭಾರತೀಯ ಚುನಾವಣಾ ಆಯೋಗದ ನವೀಕರಿಸಿದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೇಗೆ ಪರಿಶೀಲಿಸುವುದು ಎಂಬುದು ಇಲ್ಲಿದೆ:

– ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (https://www.nvsp.in/).

– ವೆಬ್‌ಸೈಟ್‌ನಲ್ಲಿ ಎರಡು ಆಯ್ಕೆಗಳು ಲಭ್ಯವಿವೆ: (ಎ) ವಿವರಗಳ ಮೂಲಕ ಹುಡುಕಿ ಮತ್ತು (ಬಿ) EPIC ಸಂಖ್ಯೆಯಿಂದ ಹುಡುಕಿ.

– ನೀವು EPIC ಸಂಖ್ಯೆಯ ಮೂಲಕ ಹುಡುಕಲು ಬಯಸಿದದಲ್ಲಿ ನಿಮ್ಮ EPIC ಸಂಖ್ಯೆ, ರಾಜ್ಯ ಮತ್ತು ಕೋಡ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಅದರ ನಂತರ ನೀವು ಕ್ಯಾಪ್ಚಾ ಕೋಡ್ ಅನ್ನು ನಮೂದು ಮಾಡಬೇಕಾಗುತ್ತದೆ ಮತ್ತು ನಂತರ ನಿಮ್ಮ ಹೆಸರನ್ನು ಕಂಡುಹಿಡಿಯಬಹುದು.

– ನೀವು ವಿವರಗಳ ಮೂಲಕ ಹುಡುಕಲು ಬಯಸಿದರೆ ನಿಮ್ಮ ವೈಯಕ್ತಿಕ ವಿವರಗಳು ಮತ್ತು ಮತದಾನದ ಪ್ರದೇಶವನ್ನು ಒಳಗೊಂಡಿರುವ ಸರಳ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ


Spread the love

About Laxminews 24x7

Check Also

ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಬಿಗ್ ಶಾಕ್ :ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ

Spread the loveಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಲ್ಬುರ್ಗಿ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಿಜೆಪಿಯ ಪರಾಜಿತ ಅಭ್ಯರ್ಥಿ ಮಲಿಕಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ