Breaking News

ದಿಢೀರ್ ಅಂತಾ ಕಾಂಗ್ರೆಸ್ ನಾಯಕರ ಬಗ್ಗೆ ಕುಮಾರಸ್ವಾಮಿ ಸಾಫ್ಟ್ ಕಾರ್ನರ್

Spread the love

ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಗಾಗ ಕಿಡಿಕಾರುತ್ತಲೇ ಇರ್ತಾರೆ. ಅದರಲ್ಲೂ ಮೊನ್ನ ನಡೆದ ರಾಜ್ಯಸಭೆ ಚುನಾವಣೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಆದ್ರೀಗ ಕುಮಾರಸ್ವಾಮಿ ತಮ್ಮ ವರಸೆಯನ್ನ ಕೊಂಚ ಬದಲಿಸಿದಂತೆ ಕಾಣ್ತಿದೆ.

ದಿಢೀರ್ ಅಂತಾ ಕಾಂಗ್ರೆಸ್ ನಾಯಕರ ಬಗ್ಗೆ ಕುಮಾರಸ್ವಾಮಿ ಸಾಫ್ಟ್ ಕಾರ್ನರ್ ತೋರಿಸಿದ್ದಾರೆ.

ಕಾಂಗ್ರೆಸ್ ನಾಯಕರ ಬಗ್ಗೆ ಹೆಚ್‌ಡಿಕೆ ಸಾಫ್ಟ್ ಕಾರ್ನರ್!
ಕಾಂಗ್ರೆಸ್ ಬಗ್ಗೆ ದಳಪತಿ ಸಾಫ್ಟ್ ಆಗಿದ್ದಾರೆ ಅನ್ನೋಕು ಅವರ ಮಾತುಗಳೇ ಸಾಕ್ಷಿಯಾಗಿವೆ. ಅದರಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇ.ಡಿ ವಿಚಾರಣೆ ನಡೆಸಿರೋ ಬಗ್ಗೆ ಹೆಚ್‌ಡಿಕೆ ಕುಟುಕಿದ್ದಾರೆ. ರಾಹುಲ್ ಗಾಂಧಿಗೆ ಇ.ಡಿ ವಿಚಾರಣೆ ನೀಡುವ ನೆಪದಲ್ಲಿ ಕುರುಕುಳ ನೀಡಲಾಗ್ತಿದೆ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.

ಕಾಂಗ್ರೆಸ್ ನಾಯಕರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಾಫ್ಟ್ ಕಾರ್ನರ್ ತೋರಿಸಿದ್ರೆ, ಇತ್ತ ಬಿಜೆಪಿ ನಾಯಕರ ವಿರುದ್ದ ಗುಡುಗುತ್ತಲೇ ಇದ್ದಾರೆ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಭೇಟಿ ವೇಳೆ ಉದ್ಘಾಟಿಸಿದ ಕಾರ್ಯಕ್ರಮಗಳ ಬಗ್ಗೆ ದಳಪತಿ ಕಿಡಿಕಾರಿದ್ರು. ಬೆಂಗಳೂರು ಉಪನಗರ ರೈಲು ಪರಿಕಲ್ಪನೆಯನ್ನ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದದ್ದಾರೆಂದು ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ