Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಸಾಕು ನಾಯಿಗಾಗಿ 5 ಸಾವಿರಜನಕ್ಕೆ , ಚಿಕನ್,ಹಾಗೂ ವೆಜ್ ಊಟ, ಕಾರಣ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ

ಸಾಕು ನಾಯಿಗಾಗಿ 5 ಸಾವಿರಜನಕ್ಕೆ , ಚಿಕನ್,ಹಾಗೂ ವೆಜ್ ಊಟ, ಕಾರಣ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ

Spread the love

ತಮ್ಮ ವಿರುದ್ದ ಅವಹೇಳನಾವಾಗಿ ಮಾತನಾಡಿದವರಿಗೆ ಪ್ರತ್ಯುತ್ತರ ನೀಡಲು ಸುಮಾರು 5 ಸಾವಿರ ಜನಕ್ಕೆ 3 ಕ್ವಿಂಟಾಲ್ ಚಿಕನ್,1 ಕ್ವಿಂಟಾಲ ತತ್ತಿ, ಹಾಗೂ ಸಸ್ಯಹಾರಿಗೆ 50 ಕಿಲೊ ಕಾಜುಕರಿ, ಊಟ ಬಡಿಸಿ ಆಚರಿಸಿದ್ದಾರೆ,

ಹಾಗಾದರೆ ಯಾರಪ್ಪ ಇತ ಅನ್ತಿರಾ ಇತ ಬೇರೆ ಯಾರು ಅಲ್ಲ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಶಿವಪ್ಪ ಯಲ್ಲಪ್ಪ ಮರ್ದಿ ಎಂಬುವವರು ತಾವು ಸಾಕಿದ ಕೃಷ್ ಎಂಬ ಸಾಕುನಾಯಿಯ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ,

ರಸ್ತೆ ಮೂಲಕ ವಾಹನದಲ್ಲಿ ನಾಯಿಯನ್ನು ಮೆರವಣಿಗೆ ಮಾಡುವ ಮೂಲಕ ವೇದಿಕೆಗೆ ತಂದು ಒಂದು ಕ್ವಿಂಟಾಲ ಕೆಕನ್ನು ನಾಯಿ ಮೂಲಕ ಕಟ್ ಮಾಡಿಸಿ ಸಾವಿರಾರು ಜನರಿಗೆ ಹಂಚುವ ಮೂಲಕ ಆಚರಿಸಿ ತುಕ್ಕಾನಟ್ಟಿ ಜನತೆಗೆ ಕೃಷ್ ಸಾಕುನಾಯಿ ಹುಟ್ಟುವನ್ನು ಆಚರಿಸುವದಲ್ಲದೆ ರಾತ್ರಿ ಕೂಡ ಸಾರ್ವಜನಿಕರಿಗೆ ರಸಮಂಜರಿ ಕಾರ್ಯಕ್ರಮವನ್ನು ಎರ್ಪಡಿಸಿದ್ದರು,

ಇಷ್ಟೊಂದು ಹಣ ಖರ್ಚು ಮಾಡಿ ಸಾಕು ನಾಯಿಯ ಹುಟ್ಟು ಹಬ್ಬ ಆಚರಿಸಲಿಕ್ಕೆ ಕೂಡ ಕಾರಣ ಇದೆ, ಕೆಲವು ದಿನಗಳ ಹಿಂದೆ ತುಕ್ಕಾನಟ್ಟಿ ಗ್ರಾಮ ಪಂಚಾಯತಿಗೆ ಆಯ್ಕೆಯಾದವರಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಸಮಯದಲ್ಲಿ ಮೊದಲಿದ್ದ ಸದಸ್ಯರಿಗೆ ಅವಹೇಳನವಾಗಿ ಮಾತನಾಡಿದ್ದರಂತೆ, ಅದಕ್ಕೆ ಶಿವಪ್ಪ ಯಲ್ಲಪ್ಪ ಮರ್ದಿ ಹಾಗೂ ಇನ್ನುಳಿದ ಸದಸ್ಯರು ಇಪ್ಪತ್ತು ವರ್ಷದಿಂದಲೂ ಪಂಚಾಯತಿಯಲ್ಲಿ ಸದಸ್ಯರಾಗಿದ್ದು ಗ್ರಾಮದಲ್ಲಿ ಒಳ್ಳೆಯ ಕಾರ್ಯ ಮಾಡಿದ್ದರೂ ಈಗಿನವರಂತೆ ಸ್ಟೇಟಸ್, ಇಡದೆ ಜನರ ಮನದಲ್ಲದೇವೆ, ಅವಹೇಳನ ಮಾಡಿದವರು ನಾಯಿಯಷ್ಟು ನಿಯತ್ತಾಗಿಲ್ಲ, ಆದರೆ ನಮ್ಮ ಮನೆ ನಾಯಿ ನಿಯತ್ತಾಗಿದೆ ಎಂದು ಪರೋಕ್ಷವಾಗಿ ನಾಯಿಗೆ ಹೊಲಿಸಿ ತುಕ್ಕಾನಟ್ಟಿ ಗ್ರಾಮದಲ್ಲಿ ಕೃಷ್ ನಾಯಿ ಹುಟ್ಟು ಹಬ್ಬ ಆಚರಿಸಿದ್ದಾರಂತೆ.

ಅಷ್ಟೆ ಅಲ್ಲ ಮುಂದಿನ ದಿನದಲ್ಲಿ ಬೇರೆ ಹಬ್ಬ ಮಾಡುವುದಾಗಿ ಹೇಳಿದ್ದಾರೆ,ಎನೆ ಇರಲಿ ಇಷ್ಟೊಂದು ಅದ್ದೂರಿಯಾಗಿ ತನ್ನ ಹುಟ್ಟು ಹಬ್ಬ ಆಚರಿಸಿಕೊಂಡ ಕೃಷ್ ನಿಜವಾಗಿ ಅದೃಷ್ಟವಂತ ನಾಯಿನೆ,ಹಾಗಾದರೆ ಇಲ್ಲಿ ಪ್ರಶ್ನೆ ಉದ್ಬವವಾಗೊದು ಇದರಲ್ಲಿ ನಾಯಿ ಯಾರು ಅಂತಾ,,,

ಅಷ್ಟೆ ಅಲ್ಲ ಕೃಷ ಸಾಕು ನಾಯಿಯ ಹುಟ್ಟು ಹಬ್ಬ ನೋಡಲು ಸುತ್ತಮುತ್ತಲಿನ ಜನರು ತುಕ್ಕಾನಟ್ಟಿ ಗ್ರಾಮಕ್ಕೆ ಆಗಮಿಸಿದ್ದರು.


Spread the love

About Laxminews 24x7

Check Also

ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ’ : ನಿರ್ಮಲಾ ಸೀತಾರಾಮನ್ ಘೋಷಣೆ

Spread the loveನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಖರ್ಚು ಮಾಡಲು ಹಣವಿಲ್ಲದ ಕಾರಣ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಣಕಾಸು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ