Breaking News

ಬಿಜೆಪಿ ಕಚೇರಿಯ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ?: ದಿನೇಶ್ ಗುಂಡೂರಾವ್

Spread the love

ಬೆಂಗಳೂರು: ಬಿಜೆಪಿ ಕಚೇರಿಯ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ ಸೆಕ್ಯೂರಿಟಿ ಗಾರ್ಡ್ ಮಾಡಿಕೊಳ್ಳಲು ಬಿಜೆಪಿಯವರಿಗೆ ಸೈನ್ಯಕ್ಕೆ ಸೇರಿದ ಅಗ್ನಿವೀರರೆ ಬೇಕೆ? ಯುವ ಸಮುದಾಯದ ಬಗ್ಗೆ ಬಿಜೆಪಿಯವರ ನಿಲುವೇನು ಎಂಬುದು ಅವರ ಹೇಳಿಕೆಗಳಿಂದಲೇ ತಿಳಿಯುತ್ತದೆ ಎಂದು ಬಿಜೆಪಿ ವಿರುದ್ಧ ಟ್ವಿಟ್ಟರ್ ಮೂಲಕ ಕಾಂಗ್ರೆಸ್‌ ಮುಖಂಡ ದಿನೇಶ್ ಗುಂಡುರಾವ್ ವಾಗ್ದಾಳಿ ನಡೆಸಿದ್ದಾರೆ.ಟ್ವೀಟ್‍ನಲ್ಲಿ ಏನಿದೆ?


ಅಗ್ನಿಪಥ್ ವಿರುದ್ದ ಹೋರಾಡುತ್ತಿರುವ ಯುವಕರ ಬಗ್ಗೆ ಬಿಜೆಪಿಯವರ ಹೇಳಿಕೆಗಳು ಆ ಪಕ್ಷದ ಮನೋವಿಕಾರವನ್ನು ಅನಾವರಣ ಮಾಡಿದೆ. ಯೋಜನೆಯ ಮೂಲಕ ಆಯ್ಕೆಯಾಗಿ ನಿರ್ಗಮಿಸುವ ಅಗ್ನಿವೀರರು ಬಿಜೆಪಿ ಕಚೇರಿ ಕಾಯುವ ಸೆಕ್ಯೂರಿಟಿ ಗಾರ್ಡ್ ಆಗಲು ಆದ್ಯತೆ ಎಂದಿರುವ ಕೈಲಾಶ್ ಹೇಳಿಕೆ ಖಂಡನೀಯ. ಈ ಹೇಳಿಕೆ ಯುವ ಸಮುದಾಯ ಮಾತ್ರವಲ್ಲ ಇಡೀ ಸೈನ್ಯಕ್ಕೆ ಮಾಡಿದ ಅವಮಾನ.ಬಿಜೆಪಿ ಕಚೇರಿಯ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ? ಸೆಕ್ಯೂರಿಟಿ ಗಾರ್ಡ್ ಮಾಡಿಕೊಳ್ಳಲು ಬಿಜೆಪಿಯವರಿಗೆ ಸೈನ್ಯಕ್ಕೆ ಸೇರಿದ ಅಗ್ನಿವೀರರೆ ಬೇಕೆ? ಯುವ ಸಮುದಾಯದ ಬಗ್ಗೆ ಬಿಜೆಪಿಯವರ ನಿಲುವೇನು ಎಂಬುದು ಅವರ ಹೇಳಿಕೆಗಳಿಂದಲೇ ತಿಳಿಯುತ್ತದೆ. ಸೇನೆಯಲ್ಲಿ ಸೇವೆ ಸಲ್ಲಿಸಿದವರು ಬಿಜೆಪಿಯ ಪರಿಚಾರಕರಾಗಬೇಕೆಂಬುದು ಬಿಜೆಪಿ ನಾಯಕರ ಅಜೆಂಡಾವೇ? 


Spread the love

About Laxminews 24x7

Check Also

ಪ್ರಿಯತಮೆ ಹಿಂದೂ… ನಾನು ಮುಸ್ಲಿಂ ಆಗಿ ಹುಟ್ಟಿದ್ದೇ ತಪ್ಪಾ? – ಸಂಜೀತ್ ಆಲಿ ಡೆತ್ ನೋಟ್

Spread the loveಚಿಕ್ಕಬಳ್ಳಾಪುರ: ಜಿಲ್ಲೆಯ ಮುದ್ದೇನಹಳ್ಳಿ ಸಮೀಪದ ಹೋಂ ಸ್ಟೇನಲ್ಲಿ ಯುವತಿ ಸಾಯಿ ಸುರಭಿ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ