Breaking News

ಮಿತಿ ಮೀರಿ ಸರಕು ಸಾಗಣೆ: ₹ 46 ಸಾವಿರ ದಂಡ

Spread the love

ಕಾರವಾರ: ಸಾಮರ್ಥ್ಯಕ್ಕಿಂತ ಹೆಚ್ಚು ಸರಕು ಸಾಗಿಸುತ್ತಿದ್ದ ಲಾರಿಯ ಚಾಲಕನಿಗೆ ಇಲ್ಲಿನ ನ್ಯಾಯಾಲಯವು ₹ 46 ಸಾವಿರ ದಂಡ ವಿಧಿಸಿದೆ. ಅಲ್ಲದೇ ವಾಹನದ ಸರಕು ಸಾಗಣೆ ಪರವಾನಗಿ ಹಾಗೂ ಚಾಲಕನ ವಾಹನ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಿದೆ.

 

ಶಿವಮೊಗ್ಗದ ಮೊಹಮ್ಮದ್ ಅಮೀರ್ ಪಾಷಾ ಶಿಕ್ಷೆಗೆ ಗುರಿಯಾದ ಚಾಲಕ. ಜೂನ್ 16ರಂದು ರಾತ್ರಿ ನಗರದ ಮೂಲಕ ಸಾಗುತ್ತಿದ್ದ ಲಾರಿಯಲ್ಲಿ ಮಿತಿ ಮೀರಿದ ಪ್ರಮಾಣದಲ್ಲಿ ಸ್ಟೀಲ್ ಸರಕು ಸಾಗಿಸಲಾಗುತ್ತಿತ್ತು. ಅಂದು ಗಸ್ತಿನಲ್ಲಿದ್ದ ನಗರದ ಸಂಚಾರ ಠಾಣೆಯ ಪಿ.ಎಸ್.ಐ ನಾಗಪ್ಪ ಮತ್ತು ಸಿಬ್ಬಂದಿ ಗದಿಗೆಪ್ಪ ಚಕ್ರಸಾಲಿ, ಮೌಲಾಲಿ ನದಾಫ್ ಅವರು ತಡೆದು ಪರಿಶೀಲಿಸಿದ್ದರು. ಬಳಿಕ ಲಾರಿಯನ್ನು ಜಪ್ತಿ ಮಾಡಿದ್ದರು.

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕಾರವಾರದ ಹಿರಿಯ ಸಿವಿಲ್ ಹಾಗೂ ಮುಖ್ಯ ನ್ಯಾಯಾಂಗ ನ್ಯಾಯಾಧೀಶರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರೇಷ್ಮಾ ರೋಡ್ರಿಗಸ್ ಅವರು, ವಾಹನ ಚಾಲಕನಿಗೆ ದಂಡ ವಿಧಿಸಿ ಆದೇಶಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ