Breaking News

ಪಿಎಸ್‍ಐ ನೇಮಕಾತಿ ಪ್ರಕರಣದಲ್ಲಿ ಭಾರೀ ಸದ್ದು ಮಾಡಿದ್ದ ಆರೋಪಿ ದರ್ಶನ್ ಗೌಡನನ್ನು ಸಿಐಡಿ ಬಂಧಿಸಿದೆ.

Spread the love

ಬೆಂಗಳೂರು: ಪಿಎಸ್‍ಐ ನೇಮಕಾತಿ ಪ್ರಕರಣದಲ್ಲಿ ಭಾರೀ ಸದ್ದು ಮಾಡಿದ್ದ ಆರೋಪಿ ದರ್ಶನ್ ಗೌಡನನ್ನು ಸಿಐಡಿ ಬಂಧಿಸಿದೆ.

ಪಿಎಸ್‍ಐ ನೇಮಕಾತಿ ಪ್ರಕರಣದ ವಿಚಾರಣೆ ವೇಳೆ ಸಚಿವ ಅಶ್ವಥ್ ನಾರಾಯಣ್ ಹಾಗೂ ಅವರ ಸಹೋದರ ಸತೀಶ್ ಹೆಸರು ಹೇಳಿದ್ದ ದರ್ಶನ್‍ಗೌಡನನ್ನು ನಿನ್ನೆ ವಶಕ್ಕೆ ಪಡೆದಿದ್ದ ಸಿಐಡಿ ಪೊಲೀಸರು ಇಂದು ಬಂಧಿಸಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ಜೊತೆಗೆ ಕೋರಮಂಗಲದಲ್ಲಿ ನೆಲಮಂಗಲ ಕಾನ್ಸ್‌ಸ್ಟೇಬಲ್‌ ಮೋಹನ್ ಕುಮಾರ್ ಹಾಗೂ ರಾಮಮೂರ್ತಿನಗರ ಪೊಲೀಸರು ಹರೀಶ್‍ನನ್ನು ಬಂಧಿಸಿದ್ದಾರೆ.

ಪ್ರತ್ಯೇಕವಾಗಿ ಮೂರು ಕೇಸ್ ದಾಖಲಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬೆಂಗಳೂರಿನ ರಾಮಮೂರ್ತಿನಗರ, ಕೋರಮಂಗಲ ಠಾಣೆ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ