Breaking News
Home / ರಾಜಕೀಯ / ಕಿರಿಕ್ ಪಾರ್ಟಿ’ 2 ಮಾಡೋಕೆ ರೆಡಿಯಾದ ಸಿಂಪಲ್ ಸ್ಟಾರ್

ಕಿರಿಕ್ ಪಾರ್ಟಿ’ 2 ಮಾಡೋಕೆ ರೆಡಿಯಾದ ಸಿಂಪಲ್ ಸ್ಟಾರ್

Spread the love

ಕಾಲೇಜ್ ಕಥೆಯನ್ನ ತೆರೆಯ ಮೇಲೆ ಎಳೆ ಎಳೆಯಾಗಿ ತೋರಿಸಿಕೊಟ್ಟ ಸ್ಯಾಂಡಲ್‌ವುಡ್‌ನ ಬ್ಲಾಕ್ ಬಸ್ಟರ್ ಸಿನಿಮಾ `ಕಿರಿಕ್ ಪಾರ್ಟಿ’ ಟೀಮ್‌ನಿಂದ ಈಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕಿರಿಕ್ ಪಾರ್ಟಿ ಸೀಕ್ವೆಲ್ ಮಾಡೋಕೆ ರಕ್ಷಿತ್ ಶೆಟ್ಟಿ ಆ್ಯಂಡ್ ಟೀಮ್ ಯೋಜನೆ ಹಾಕಿಕೊಂಡಿದೆ.

ರಕ್ಷಿತ್ ಶೆಟ್ಟಿ ಕೆರಿಯರ್‌ನ ದಿಕ್ಕನ್ನೇ ಬದಲಿಸಿದ ಸಿನಿಮಾ `ಕಿರಿಕ್ ಪಾರ್ಟಿ’ ಕಥೆಯನ್ನ ಎಲ್ಲರೂ ನೋಡಿ ಮೆಚ್ಚಿಕೊಂಡಿದ್ದರು. ಕರ್ಣ ಮತ್ತು ಸಾನ್ವಿ ಲವ್‌ಸ್ಟೋರಿಯಿಂದ ಹಿಡಿದು ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ಈ ಚಿತ್ರದಿಂದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಸಿನಿ ಬದುಕೆ ಬದಲಾಗಿತ್ತು. ಈಗ ರಶ್ಮಿಕಾ ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಜತೆಗೆ ರಕ್ಷಿತ್ ಶೆಟ್ಟಿ ಕೂಡ ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿದ್ದರು. ಇಷ್ಟೇಲ್ಲಾ ಮೋಡಿ ಮಾಡಿರುವ `ಕಿರಿಕ್ ಪಾರ್ಟಿ’ ಚಿತ್ರದ ಸೀಕ್ವೆಲ್‌ಗೆ ಸಕಲ ಸಿದ್ಧತೆ ನಡೆಯುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಹೊಸ ಕ್ಯಾಪ್ ಕಟ್ಟಿಕೊಂಡು `ಕಿರಿಕ್ ಪಾರ್ಟಿ 2′ ಮಾಡೋಕೆ ರಕ್ಷಿತ್ ಶೆಟ್ಟಿ ಸಜ್ಜಾಗಿದ್ದಾರೆ. ಹೊಚ್ಚ ಹೊಸ ಕಥೆಯ ಜತೆ ಹೊಸ ಪಾತ್ರ ವರ್ಗ ಕೂಡ ಇರಲಿದೆ. ತೆರೆಮರೆಯಲ್ಲಿ ಚಿತ್ರಕ್ಕಾಗಿ ಸಕಲ ತಯಾರಿ ನಡೆಯುತ್ತಿದೆ. ಇನ್ನು `ಕಿರಿಕ್ ಪಾರ್ಟಿ’ ತಂಡ ಮೋಡಿ ಮಾಡೋದು ಗ್ಯಾರೆಂಟಿ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ