Breaking News

ಮತ್ತೊಂದು ಪೋಸ್ಟರ್ ಬಿಟ್ಟು ಮತ್ತೆ ತಲೆಗೆ ಹುಳಬಿಟ್ಟ ಉಪೇಂದ್ರ:

Spread the love

ಬೆಂಗಳೂರು: ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ..!

– ಇದು ರಿಯಲ್​ ಸ್ಟಾರ್​ ಉಪೇಂದ್ರ ನಾಯಕನಾಗಿ ಅಭಿನಯಿಸಿ, ನಿರ್ದೇಶಿಸಿದ್ದ ಮೊದಲ ಚಿತ್ರ ‘A’ಗೆ ಕೊಟ್ಟಿದ್ದ ಟ್ಯಾಗ್​ಲೈನ್. ಹೀಗೆ ಆರಂಭದಿಂದಲೂ ಚಿತ್ರವಿಚಿತ್ರ ಟೈಟಲ್​, ವಿಶಿಷ್ಠ ಕಥೆ, ನಿರೂಪಣೆ ಇತ್ಯಾದಿಯಿಂದ ತಮ್ಮದೇ ಟ್ರೆಂಡ್​ ಸೆಟ್ ಮಾಡಿರುವ ಉಪೇಂದ್ರ ಇದೀಗ ತಮ್ಮ ನಿರ್ದೇಶನದ ಮತ್ತೊಂದು ಚಿತ್ರದ ಶೂಟಿಂಗ್​ಗೆ ಮುಂದಾಗಿದ್ದು, ಮುಹೂರ್ತಕ್ಕೆ ಇನ್ನೊಂದು ದಿನ ಬಾಕಿ ಇರುವಾಗಲೇ ಚಿತ್ರರಸಿಕರ ತಲೆಗೆ ಮತ್ತೆ ಹುಳ ಬಿಟ್ಟಿದ್ದಾರೆ.

 

ಹಿಂದಿನಂತೆ ಈ ಚಿತ್ರಕ್ಕೂ ಉಪೇಂದ್ರ ವಿಶಿಷ್ಟವಾದ ಟೈಟಲ್​ ಇಟ್ಟಿದ್ದು, ಸಿನಿಪ್ರಿಯರು ಅದನ್ನು ತಮಗೆ ಬೇಕಾದಂತೆ ವಿಶ್ಲೇಷಿಸುತ್ತಿದ್ದಾರೆ. ಟೈಟಲ್​ ನೋಂದಣಿ ಪ್ರಕಾರ ಇದನ್ನು ‘ಯುಐ’ ಎಂದು ಹೇಳಲಾಗುತ್ತಿದ್ದರೂ, ಶೀರ್ಷಿಕೆಯನ್ನು ಬರೀ ಒಂದು ಲಾಂಛನದ ರೀತಿಯಲ್ಲಿ ತಿಳಿಸಿರುವುದರಿಂದ ನಾನಾ ಅರ್ಥ ಹೊಮ್ಮಿಸುತ್ತಿದೆ. ಈ ಚಿತ್ರದ ಮೊದಲ ಪೋಸ್ಟರ್ ಬಿಟ್ಟಾಗಲೇ ಹೀಗೆ ಕುತೂಹಲ ಕೆರಳಿಸಿದ್ದ ಉಪ್ಪಿ, ಇಂದು ಮತ್ತೊಂದು ಪೋಸ್ಟರ್ ಬಿಟ್ಟು ಮೆದುಳಿಗೆ ಮೇವಾಗಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ