Breaking News
Home / ಜಿಲ್ಲೆ / ಬೆಳಗಾವಿ / ಖಾನಾಪುರ / ಆ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ ಭೀಮ ವಾದ

ಆ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ ಭೀಮ ವಾದ

Spread the love

ಖಾನಾಪುರ ತಾಲೂಕಿನ ಚಿಕ್ಕ ಮುನವಳ್ಳಿ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಕ್ಕೆ ದಲಿತ ಕುಟುಂಬಗಳಿಗೆ ನಿಷೇಧಿಸಲಾಗಿತ್ತು. ಇದೀಗ ಈ ದಲಿತ ಕುಟುಂಬಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮ ವಾದ) ಜಿಲ್ಲಾ ಘಟಕದ ವತಿಯಿಂದ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

ಹೌದು ಚಿಕ್ಕಮುನವಳ್ಳಿ ಗ್ರಾಮದಲ್ಲಿ ಇತ್ತಿಚಿಗೆ ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮವಿತ್ತು. ಈ ವೇಳೆ ದಲಿತರಿಗೆ ದೇವಸ್ಥಾನಗದ ಒಳಗೆ ಪ್ರವೇಶ ಇಲ್ಲ ಎಂದು ಕಮೀಟಿ ಅವರು ಹೇಳಿದ್ದರು. ಈ ವಿಚಾರ ಇಡೀ ರಾಜ್ಯದಲ್ಲಿಯೇ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಕರ್ನಾಟಕ  ದಲಿತ ಸಂಘರ್ಷ ಸಮಿತಿ ಭೀಮ ವಾದ ಸಂಘಟನೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಈ ಕುಟುಂಬಗಳಿಗೆ ಒಂದು ತಿಂಗಳಕ್ಕೆ ಆಗುವಷ್ಟು 25 ಕೆಜಿ ಅಕ್ಕಿ, 10 ಕೆಜಿ ಗೋಧಿ ಹಿಟ್ಟು, ಐದು ಕೆಜಿ ಬೇಳೆ 5 ಕೆಜಿ ಸಕ್ಕರೆ, 3 ಎಣ್ಣೆ, ಒಂದು ಕೆಜಿ ಚಹಾಪುಡಿ, 1 ಕೆಜಿ ಕಾರದಪುಡಿಯನ್ನು ವಿತರಿಸಲಾಯಿತು.

ಈ ವೇಳೆ ಮುಖಂಡರಾದ ಬಸವರಾಜ್ ರಾಯವ್ವಗೋಳ, ಸಿದ್ರಾಯಿ ಮೇತ್ರಿ, ರವಿ ಬಸ್ತವಾಡಕರ್, ಸಂಯೋಷ ಕಾಂಬಳೆ, ಶಂಕರ್ ಕಾಂಬಳೆ, ವಿನಾಯಕ್ ಕೋಲಕಾರ್, ಮಹಾಂತೇಶ ಹಾದಿಮನಿ, ಪರಸು ಹಲಸಿ, ಸಂತೋಷ ತಳವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಅರ್ಥಿಂಗ್ ಸಮಸ್ಯೆ – ಶೌಚಾಲಯಕ್ಕೆ ಬೀಗ, ಬಹಿರ್ದೆಸೆಗೆ ಮಹಿಳೆಯರ ಅಲೆದಾಟ

Spread the loveಸಿಂಧನೂರು: ನಗರದ ವಾರ್ಡ್ ನಂ.19ರ ವ್ಯಾಪ್ತಿಗೊಳಪಡುವ ಶರಣಬಸವೇಶ್ವರ ಕಾಲೊನಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ