Breaking News

ಅಭಯ್ ಪಾಟೀಲ್ ತಮ್ಮ ಸ್ವಂತ ಜಾಗದ ಎದುರುಗಿನ ಸಾಯಿ ಮಂದಿರ ತೆರವು ಮಾಡಿರುವ ಆರೋಪ : ಮನ್ಸೂರ್ ಖಾನ್

Spread the love

ಬೆಳಗಾವಿ: ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ತಮ್ಮ ಸ್ವಂತ ಜಾಗದ ಎದುರುಗಿನ ಸಾಯಿ ಮಂದಿರ ತೆರವು ಮಾಡಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಕಾಂಗ್ರೆಸ್ ಮುಖಂಡ ಮನ್ಸೂರ್ ಖಾನ್ ಸಾಯಿ ಮಂದಿರ ತೆರವು ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.

ತಾಲೂಕಿನ ಆನಗೋಳ ನಗರದ ಅನಗೋಳ ಮುಖ್ಯ ರಸ್ತೆಯಲ್ಲಿರುವ ಸಾಯಿ ಮಂದಿರ ತೆರವು ಮಾಡಿರುವ ಆರೋಪ ಕೇಳಿಬಂದಿದೆ. ಶಾಸಕ ಅಭಯ್ ಪಾಟೀಲ್ ತಮ್ಮ ಸ್ವಂತ ಜಾಗದ ಎದುರುಗಿನ ಸಾಯಿ ಮಂದಿರವನ್ನು 2011ರಲ್ಲಿ ತೆರವುಗೊಳಿಸಿದ್ದಾರೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಫೋಟೋ ವೈರಲ್ ಆಗಿದೆ. ಇನ್ನು ಹಿಂದುತ್ವ ಎನ್ನುವ ಅಭಯ್ ಪಾಟೀಲ್ ಇದರ ಬಗ್ಗೆ ಉತ್ತರಿಸಬೇಕು ಎಂದು ಮುಸ್ಲಿಂ ಮುಖಂಡ ಮನ್ಸೂರ್ ಆರೋಪಿಸಿದ್ದಾರೆ. 

ಇನ್ನೂ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಅಭಯ್ ಪಾಟೀಲ್, ರಸ್ತೆಯ ಮಾಸ್ಟರ್‌ ಪ್ಲ್ಯಾನ್ ವೇಳೆ ಸಾಯಿ ಮಂದಿರ ತೆರವು ಮಾಡಲಾಗಿದೆ. ಅಲ್ಲಿಯ ಜನರ ಮನವೊಲಿಸಿ ಸಾಯಿ ಮಂದಿರ ತೆರವು ಮಾಡಲಾಗಿದೆ. ನಾಥ್ ಪೈ ಸರ್ಕಲ್‍ನಿಂದ ಯಳ್ಳೂರ ಸರ್ಕಲ್‍ವರೆಗೆ ಮಾಸ್ಟರ್ ಪ್ಲ್ಯಾನ್ ಮಾಡಲಾಗಿತ್ತು. 


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ