Breaking News
Home / ಜಿಲ್ಲೆ / ಹಾವೇರಿ / ಕಾ ರಾಜಾನನ್ನು ನೋಡಲು ರಾಣೇಬೆನ್ನೂರಿಗೆ ಬಂದ ಹರ್ಷನ ಕುಟುಂಬ

ಕಾ ರಾಜಾನನ್ನು ನೋಡಲು ರಾಣೇಬೆನ್ನೂರಿಗೆ ಬಂದ ಹರ್ಷನ ಕುಟುಂಬ

Spread the love

ಹಾವೇರಿ: ಶಿವಮೊಗ್ಗದ ಹಿಂದೂ ಹುಲಿ ಹರ್ಷನ ಕುಟುಂಬವು ಕಾ ರಾಜಾನನ್ನು ನೋಡಲು ರಾಣೇಬೆನ್ನೂರಿಗೆ ಆಗಮಿಸಿದ್ದರು. ಈ ವೇಳೆ ಹರ್ಷನನ್ನೆ ನೋಡಿದಷ್ಟು ಸಂತೋಷವಾಯಿತು ಎಂದು ಸಂತೋಷ ವ್ಯಕ್ತಪಡಿಸಿದರು.

021 ಡಿಸೆಂಬರ್ 4 ರಂದು ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ(ರಿ) ರಾಣೇಬೆನ್ನೂ‌ರ ಇವರ ವತಿಯಿಂದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಒಂದು ಹೋರಿಯನ್ನು ಸುಮಾರು 9 ಲಕ್ಷ ರೂ.ಗೆ ತಂದು ಅದಕ್ಕೆ ರಾಣೇಬೆನ್ನೂರ ಕಾ ರಾಜಾ ಎಂಬ ಹೆಸರನ್ನು ನಾಮಕರಣ ಮಾಡಿದ್ದಾರೆ. ಅದನ್ನು ಕೊಬರಿ ಹೊರಿ ಹಬ್ಬದ ಅಖಾಡಕ್ಕೆ ಬಿಡಲಾಗಿತ್ತು. ಈ ಹೋರಿ ಮೂರು ನಾಲ್ಕು ಹಬ್ಬಗಳನ್ನು ಮಾಡಿದರು ಅಷ್ಟೇನೂ ಹೆಸರು ಮಾಡಿರಲಿಲ್ಲ. ಆದರೆ ಶಿವಮೊಗ್ಗದ ಹಿಂದೂ ಹುಲಿ ಹರ್ಷನ ಸವಿನೆನಪು ಎಂದು ಅಖಾಡಕ್ಕೆ ಬಿಡಲಾಯಿತು. ನಂತರ ನೆಡೆದಿದ್ದೆಲ್ಲವು ಇತಿಹಾಸ.ಹಿಂದೂ ಹುಲಿ ಹರ್ಷನ ಸವಿನೆನಪಿಗಾಗಿ ರಾಣೇಬೆನ್ನೂರ ಕಾ ರಾಜಾ(ಈ ಹೆಸರನ್ನಾ ಕೂಗಿದ ತಕ್ಷಣ ಇಡೀ ಕೊಬರಿ ಹೊರಿ ಹಬ್ಬದ ಅಖಾಡಕ್ಕೆ ಅಖಾಡವೇ ಕೇ ಕೀ ಹೊಡೆದು ಕುಣಿದು ಕುಪ್ಪಳಿಸುತ್ತದೆ) ಎಂದು ನಾಮಕರಣ ಮಾಡಿ ಬಿಟ್ಟ ಮೊದಲ ಹಬ್ಬದಲ್ಲೇ ಬಂಗಾರದ ಉಂಗುರವನ್ನು ಬಹುಮಾನವಾಗಿ ಪಡೆಯಿತು.


Spread the love

About Laxminews 24x7

Check Also

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಡಿ ಕೆ ಶಿವಕುಮಾರ್ ಶಾಸಕರಿಗೆ ನೀಡಿರುವ ಎಚ್ಚರಿಕೆ ಕುರಿತು ಮಾತನಾಡುವುದಿಲ್ಲ ಎಂದಿದ್ದಾರೆ.

Spread the love ಹಾವೇರಿ : ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ವಿಚಾರದಲ್ಲಿ, ಆಂತರಿಕ ವಿಚಾರದಲ್ಲಿ ಹೇಳಿಕೆ ನೀಡದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ