Breaking News

ಯುವತಿಗೆ ರಿವಾಲ್ವಾರ್ ತೋರಿಸಿ ಪಿಜಿ ಮಾಲೀಕನಿಂದ ಅತ್ಯಾಚಾರ

Spread the love

ಬೆಂಗಳೂರು: ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಬಂದಿದ್ದ ಯುವತಿಗೆ ರಿವಾಲ್ವಾರ್ ತೋರಿಸಿ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿದೆ.

ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಬಿಹಾರ ಮೂಲದ ಉದ್ಯಮಿ‌ಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅನಿಲ್ ರವಿಶಂಕರ್ ಪ್ರಸಾದ್ ಬಂಧಿತ. ಈತ ಟೈಲ್ಸ್ ಬಿಸಿನೆಸ್ ಮಾಡುತ್ತಿದ್ದ. ಈತನ ಒಡೆತನದ ಪಿಜಿಯಲ್ಲಿದ್ದ ಯುವತಿಯೊಬ್ಬಳಿಗೆ ಆರೋಪಿಯು ರಿವಾಲ್ವಾರ್​ ತೋರಿಸಿ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದಾನೆ ಎಂದು ದೂರು ದಾಖಲಾಗಿದೆ. ಪೊಲೀಸರು ಆರೋಪಿ ಜತೆಗೆ ರಿವಾಲ್ವರ್ ಅನ್ನೂ ಜಪ್ತಿ ಮಾಡಿದ್ದಾರೆ. ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಮೂರು ದಿನಗಳ ಕಸ್ಟಡಿಗೆ ಪಡೆದಿದ್ದಾರೆ.


Spread the love

About Laxminews 24x7

Check Also

ಸಾಗರ | ಬ್ರೇಕ್‌ ಫೇಲ್‌ ಆಗಿ ಮನೆ ಮೇಲೆ ಬಿದ್ದ ಪ್ರವಾಸಿ ಬಸ್ – 8 ಮಹಿಳೆಯರಿಗೆ ಗಾಯ

Spread the loveಶಿವಮೊಗ್ಗ: ಪ್ರವಾಸಕ್ಕೆ ಬಂದಿದ್ದ ಬಸ್ ಬ್ರೇಕ್‌ ಫೇಲ್‌ ಆಗಿ ಮನೆಯೊಂದರ ಮೇಲೆ ಬಿದ್ದ ಘಟನೆ ಸಾಗರ  ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ