Home / ರಾಜಕೀಯ / ಲೋಕಾಯುಕ್ತ: ಅಹವಾಲು ಸ್ವೀಕಾರ 24ರಿಂದ

ಲೋಕಾಯುಕ್ತ: ಅಹವಾಲು ಸ್ವೀಕಾರ 24ರಿಂದ

Spread the love

ಬೆಳಗಾವಿ: ಜಿಲ್ಲೆಯ ತಾಲ್ಲೂಕುಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡಲು ವಿಳಂಬ ಮತ್ತಿತರ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರು, ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಕರ್ನಾಟಕ ಲೋಕಾಯುಕ್ತ ಕಾಯ್ದೆಯಲ್ಲಿ ಅಹವಾಲು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

 

ಮೇ 24ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ರಾಮದುರ್ಗದ ಪ್ರವಾಸಿ ಮಂದಿರದಲ್ಲಿ ಡಿಎಸ್ಪಿ ಜೆ.ರಘು, ಖಾನಾಪುರ ಪ್ರವಾಸಿ ಮಂದಿರದಲ್ಲಿ ಡಿಎಸ್ಪಿ ಬಿ.ಎಸ್. ಪಾಟೀಲ ಅವರಿಗೆ ದೂರು ನೀಡಬಹುದು. ಮೇ 25ರಂದು ಚಿಕ್ಕೋಡಿ, ನಿಪ್ಪಾಣಿ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಇನ್‌ಸ್ಪೆಕ್ಟರ್‌ ಪಿ.ಆರ್. ಧಬಾಲಿ, ಮೇ 26ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಸವದತ್ತಿ ಪ್ರವಾಸಿ ಮಂದಿರದ ಇನ್‌ಸ್ಪೆಕ್ಟರ್‌ ಅನ್ನಪೂರ್ಣಾ ಹುಲಗೂರ, ಮೇ 27ರಂದು ಬೆಳಿಗ್ಗೆ 11ರಿಂದ ಅಥಣಿ ಮತ್ತು ಕಾಗವಾಡ ಪ್ರವಾಸಿ ಮಂದಿರದಲ್ಲಿ ಪಿಐ ರವಿಕುಮಾರ್ ಧರ್ಮಟ್ಟಿ ಅವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿದ್ಯುತ್‌ ವ್ಯತ್ಯಯ ಮೇ 22ರಂದು

ಬೆಳಗಾವಿ: ಹೊರವಲಯದ ಕಣಬರ್ಗಿ 100 ಕೆ.ವಿ. ಉಪ ಕೇಂದ್ರದಲ್ಲಿ ನಿರ್ವಹಣೆ ಕಾರ್ಯ ಕೈಗೊಂಡಿರುವುದರಿಂದ ಮೇ 22ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ನಗರದ ವಿವಿಧೆಡೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಪ್ರದೇಶಗಳು: ಕೆಐಎಡಿಬಿ ಆಟೊನಗರ ಕೈಗಾರಿಕಾ ಪ್ರದೇಶ, ಕೆ.ಎಸ್.ಐ.ಡಿ.ಬಿ. ಕೈಗಾರಿಕಾ ಪ್ರದೇಶ, ಕಣಬರ್ಗಿ ನಗರ, ಕೆ.ಎಚ್.ಬಿ. ಕಾಲೊನಿ, ಅಂಬೇಡ್ಕರ್‌ ಕಾಲೊನಿ, ಕಾಕತಿ, ಮುತ್ಯಾನಟ್ಟಿ, ಬಸವನಕೊಳ್ಳ ನೀರು ಸರಬರಾಜು ಪ್ರದೇಶ.

ಬ್ಯೂಟಿ ಪಾರ್ಲರ್: ಉಚಿತ ತರಬೇತಿ

ಬೆಳಗಾವಿ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್‌ಸೆಟಿ)ಯಿಂದ ಜಿಲ್ಲೆಯ ಗ್ರಾಮೀಣ ಮಹಿಳೆಯರು, ನಿರುದ್ಯೋಗಿಗಳಿಗೆ ಮೇ 25ರಿಂದ ಜೂನ್ 23ರವರೆಗೆ ಬ್ಯೂಟಿ ಪಾರ್ಲರ್‌ ನಡೆಸುವ ಬಗ್ಗೆ ಉಚಿತ ತರಬೇತಿ ನೀಡಲಿದೆ.

18ರಿಂದ 45 ವಯೋಮಿತಿಯ ನಿರುದ್ಯೋಗಿಗಳು ಭಾಗವಹಿಸಬಹುದು. ತರಬೇತಿ ನಂತರ ಸ್ವ ಉದ್ಯೋಗ ಕೈಗೊಳ್ಳಲು ಸಿದ್ಧವಿರಬೇಕು. ಮೇ 24ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ:9845750043 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ