Breaking News

ಗೋಕಾಕ ನಗರದಲ್ಲಿ ಹೆರಾಯಿನ್,ಗಾಂಜಾ ವಶ:ನಾಲ್ವರ ಬಂಧನ

Spread the love

ಗೋಕಾಕ ನಗರದಲ್ಲಿ ಹೆರಾಯಿನ್,ಗಾಂಜಾ ವಶ:ನಾಲ್ವರ ಬಂಧನನಿಷೇಧಿತ ಹೆರಾಯಿನ್ ಮಾರಾಟ ಮಾಡುತ್ತಿದ್ದ ಬೆಳಗಾವಿಯ ಮೂವರು ಮತ್ತು ಖರೀದಿಗೆ ಮುಂದಾಗಿದ್ದ ಗೋಕಾಕದ ಒಬ್ಬನನ್ನು ಗೋಕಾಕ್ ನಗರದಲ್ಲಿ ಬಂಧಿಸಿರುವ ಪೊಲೀಸರು ಭಾರಿ ಪ್ರಮಾಣದಲ್ಲಿ ಪೆನ್ನಿಯನ್ನು ವಶಪಡಿಸಿಕೊಂಡಿದ್ದಾರೆ.

ಗೋಕಾಕ ಪಿಡಬ್ಲೂಡಿ ಐಬಿಯ ಹತ್ತಿರ ಬೆಳಗಾವಿಯ ಅಬ್ದುಲ್‌ಖಾದಿರ @ಜಿಯಾ ನಾಯಿಕ, ಮೋಸಿನ್ ಜಮಾದಾರ ಮತ್ತು ಸಲ್ಮಾನ ಮುಲ್ಲಾ ಇವರು ತಮ್ಮ ಕಾರ್ (ನಂಬರ ಕೆಎ-5l-ಎಮ್ ಸಿ0787 ನೇದ್ದರಲ್ಲಿ) ನಲ್ಲಿ ನಿಷೇಧಿತ ಹೇರಾಯಿನ್ (ಪೆನ್ನಿ) ಮಾದಕ ವಸ್ತು ಮತ್ತು ಗಾಂಜಾ ಮಾದಕ ವಸ್ತುವನ್ನು ಬೆಳಗಾವಿಯಿಂದ ತೆಗೆದುಕೊಂಡು ಗೋಕಾಕಕ್ಕೆ ಹೋಗಿ ಗೋಕಾಕದಲ್ಲಿ ‘ಪಿಡಬ್ಲೂಡಿ ಐಬಿ ಗೇಟ್ ಎದುರು ಅರ್ಬಾಜ ಶಬಾಸಖಾನ ಸಾ: ಗೋಕಾಕ ಎಂಬಾತನಿಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಗೋಕಾಕ ಡಿಎಸ್ಪಿ ಮನೋಜಕುಮಾರ ನಾಯಿಕ ಮತ್ತು ಬೆಳಗಾವಿಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪಿಐ ವೀರೇಶ ಟಿ ದೊಡಮನಿ ಹಾಗೂ ಸಂಗಡ ನಾಗನಗೌಡ ಕಟ್ಟಿಮನಿಗೌಡ್ರ ಪಿಎಸ್‌ಐ, ಎಸ್ ಆರ್. ಮಾಳಗಿ, ವೈ ವಿ ಸಪ್ತಸಾಗರ, ಎಮ್ ಬಿ ಕಾಂಬಳೆ,ಜಿ ಎಸ್ ಲಮಾಣಿ,ಎನ್ ಆರ್ ಘಡಪ್ಪನವರ, ಹಾಗೂ ಗೋಕಾಕ ಶಹರ ಠಾಣೆಯ ಆರ್ ಎನ್ ಮುರನಾಳ ಸಿಬ್ಬಂದಿ ಯೊಂದಿಗೆ ಗೋಕಾಕಕ್ಕೆ ತೆರಳಿ ಅಕ್ರಮವಾಗಿ ನಿಷೇಧಿತ ಪೆನ್ನಿ ಮಾದಕ ವಸ್ತು ಮತ್ತು ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುವಾಗ ದಾಳಿಮಾಡಿದರು.
1. ಅಬ್ದುಲ್‌ಖಾದಿರ @ ಜಿಯಾ ಅತಿಕ್‌ಉರ್‌ರಹಮಾನ್ ನಾಯಿಕ ಸಾ:ಮಾಳಮಾರುತಿ ಎಕ್ಸಟೆನ್ಸನ್ ಮಹಾಂತೇಶ ನಗರ, ಬೆಳಗಾವಿ, 2. ಮೋಸಿನ್ ಅಬ್ದುಲ್‌ಮಜಿದ್ ಜಮಾದಾರ ಸಾ:ಮದರಸಾ ಹತ್ತಿರ, ಮುಖ್ಯರಸ್ತೆ, ಪಂತ ಬಾಳೆಕುಂದ್ರಿ ತಾ: ಬೆಳಗಾವಿ, 3. ಸಲ್ಮಾನ ರಫೀಕ ಮುಲ್ಲಾ ಸಾ: ಶಗನಮಟ್ಟಿ ಹಾಲಿ: ತಾರಿಹಾಳ ರೋಡ್, ಹಲಗಾ ತಾ: ಬೆಳಗಾವಿ, 4. ಅರ್ಬಾಜ ಇಸ್ಮಾಯಿಲ ಶಬಾಸಖಾನ ಸಾ: ಮಸ್ತಾನಸಾಬ ದರ್ಗಾ ಹತ್ತಿರ, ಮೋಮಿನ್ ಗಲ್ಲಿ ಗೋಕಾಕ ಇವರನ್ನು ಬಂಧಿಸಲಾಗಿದೆ.
ವಶಪಡಿಸಿಕೊಳ್ಳಲಾದ ವಸ್ತುಗಳು –

1) ನಿಷೇಧಿತ ಹೇರಾಯಿನ್ (ಪೆನ್ನಿ) -ಮಾದಕ ವಸ್ತು ಒಟ್ಟು 87 ಚೀಟಗಳು (8 ಗ್ರಾಂ)
26,100/- ರೂಪಾಯಿ
2) ಗಾಂಜಾ -ಮಾದಕ ಪದಾರ್ಥ 600 ಗ್ರಾಂ 20,000/- ರೂಪಾಯಿ
3) ಚವರಲೆಟ್ ಸ್ಪಾರ್ಕ ಕಂಪನಿಯ ಕಾರ್‌ ನಂಬರ್ ಕೆಎ-51-ಎಮ್-ಸಿ0787, 1,00,000/ ರೂ.
4) ಹೊಂಡಾ ಕಂಪನಿಯ ಡಿಯೊ ಮೋಟರ್ ಸೈಕಲ್ ನಂಬರ ಕೆಎ-49-ಡಬ್ಲ್ಯೂ-8018, 50,000 ರೂ
5) ಒಟ್ಟು 5 ಮೊಬೈಲ್‌ ಫೋನ್‌
ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ