Breaking News
Home / ರಾಜಕೀಯ / ಎಂ.ಬಿ.ಎ., ಬಿ.ಇ ಮುಗಿಸಿದ ಅವರು ಅದಕ್ಕೆ ತಕ್ಕುದಾದ ನೌಕರಿ ಸಿಕ್ಕಿದರೂ ಅದನ್ನು ತೊರೆದು ಕೃಷಿಕರಾಗಿದ್ದಾರೆ.

ಎಂ.ಬಿ.ಎ., ಬಿ.ಇ ಮುಗಿಸಿದ ಅವರು ಅದಕ್ಕೆ ತಕ್ಕುದಾದ ನೌಕರಿ ಸಿಕ್ಕಿದರೂ ಅದನ್ನು ತೊರೆದು ಕೃಷಿಕರಾಗಿದ್ದಾರೆ.

Spread the love

ಹಗರಿಬೊಮ್ಮನಹಳ್ಳಿ: ಓದು ಮುಗಿದ ನಂತರ ಮಹಾನಗರಗಳಿಗೆ ತೆರಳಿ, ಕೆಲಸಕ್ಕೆ ಸೇರಿದರೆ ಉದ್ದೇಶ ಈಡೇರಿತು ಎಂಬ ಭಾವನೆ ಹಲವರದು. ಆದರೆ, ತಾಲ್ಲೂಕಿನ ಅಡವಿ ಆನಂದದೇವನಹಳ್ಳಿಯ ದೀಪ್ತಿ ಬಾಲಕೋಟೇಶ್ವರರಾವ್‌ ವೆಲ್ಲಂಕಿ ಇದಕ್ಕೆ ತದ್ವಿರುದ್ಧ.

ಎಂ.ಬಿ.ಎ., ಬಿ.ಇ ಮುಗಿಸಿದ ಅವರು ಅದಕ್ಕೆ ತಕ್ಕುದಾದ ನೌಕರಿ ಸಿಕ್ಕಿದರೂ ಅದನ್ನು ತೊರೆದು ಕೃಷಿಕರಾಗಿದ್ದಾರೆ. ಈಗ ಅವರಿಗೆ 27ರ ಹರೆಯ.

ಬದುಕು ಕಟ್ಟಿಕೊಳ್ಳುವ ವಯಸ್ಸು. ತನ್ನೆದುರಿಗೆ ಅನೇಕ ಅವಕಾಶಗಳಿದ್ದರೂ ಅವುಗಳನ್ನು ನಿರ್ಲಕ್ಷಿಸಿ ಕೃಷಿಯಲ್ಲಿ ತೊಡಗಿದ್ದಾರೆ. ಅದು ಕೂಡ ಸಾವಯವ ಕೃಷಿ.

ಆರಂಭದಲ್ಲಿ 20 ಎಕರೆಯಲ್ಲಿ ದಾಳಿಂಬೆ ಬೆಳೆದು ನಷ್ಟ ಅನುಭವಿಸಿದ್ದರು. ಆದರಿಂದ ವಿಚಲಿತರಾಗದೆ, ಬಳಿಕ ನೇರಳೆ, ಪೇರಲ, ಮೋಸಂಬಿ ಬೆಳೆದು ಯಶ ಕಂಡಿದ್ದಾರೆ. 300 ಗಿಡ ನೇರಳೆ , ಸಾವಿರ ಪೇರಲ ಗಿಡ, ಆರು ಎಕರೆಯಲ್ಲಿ ಮೋಸಂಬಿ ಬೆಳೆದಿದ್ದಾರೆ. ಮೂರು ಕೃಷಿ ಹೊಂಡ ನಿರ್ಮಿಸಿ ಅಂತರ್ಜಲ ಹೆಚ್ಚಿಸಿದ್ದಾರೆ. ಅದರಲ್ಲೇ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಜೇನು ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ.

ದೇಸಿ ತಳಿಯ 40 ಹಸು, ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಅವರೇ ಗೊಬ್ಬರ ತಯಾರಿಸಿಕೊಳ್ಳುತ್ತಿದ್ದಾರೆ. ಹೀಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಯಶಸ್ಸಿನ ಕಡೆಗೆ ಹೆಜ್ಜೆ ಹಾಕಿದ್ದಾರೆ. ಇವರ ಸಾಧನೆಗೆ ಕಿರೀಟವೆಂಬಂತೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯವು 2021ರಲ್ಲಿ ಶ್ರೇಷ್ಠ ತೋಟಗಾರಿಕೆ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ