Home / ರಾಜಕೀಯ / ಮಾಜಿ ಸಿಎಂ ಪುತ್ರ ಸಹಿತ ಮೂವರ ವಿರುದ್ಧ ಸಿಐಡಿಗೆ ದೂರು

ಮಾಜಿ ಸಿಎಂ ಪುತ್ರ ಸಹಿತ ಮೂವರ ವಿರುದ್ಧ ಸಿಐಡಿಗೆ ದೂರು

Spread the love

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಕೇವಲ ಅಭ್ಯರ್ಥಿಗಳು ಮಾತ್ರವಲ್ಲದೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಪುತ್ರ, ಸಚಿವ ಡಾ| ಅಶ್ವತ್ಥನಾರಾಯಣ ಹಾಗೂ ಈ ಹಿಂದೆ ನೇಮಕಾತಿ ವಿಭಾಗದಲ್ಲಿದ್ದ ಎಡಿಜಿಪಿ ಅಮೃತ್‌ ಪೌಲ್‌ ಅವರನ್ನು ವಿಚಾರಣೆ ನಡೆಸಬೇಕು ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ವಕೀಲ ಎ.ಪಿ.

ರಂಗನಾಥ್‌ ನೇತೃತ್ವದ ತಂಡ ಸಿಐಡಿ ಮುಖ್ಯಸ್ಥರಿಗೆ ದೂರು ನೀಡಿದೆ.

ಪಿಎಸ್‌ಐ ಪ್ರಶ್ನೆ ಪತ್ರಿಕೆಯಲ್ಲಿ ಈ ಮೂವರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ತನಿಖಾಧಿಕಾರಿಗಳು ಇದುವರೆಗೂ ಇವರಿಗೆ ನೋಟಿಸ್‌ ಕೊಟ್ಟಿಲ್ಲ. ಹೀಗಾಗಿ ಮೂವರಿಗೂ ನೋಟಿಸ್‌ ಕೊಟ್ಟು ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಜತೆಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಯಲ್ಲೂ ಅಕ್ರಮ ನಡೆದಿದ್ದು, ಆದರೆ ಸಮರ್ಪಕ ತನಿಖೆಗಾಗಿ ಸಿಐಡಿಗೆ ವಹಿಸಬೇಕು ಎಂದು ಕೋರಿದ್ದಾರೆ.

ಭ್ರಷ್ಟಾಚಾರದ ಕುರಿತು ಹೇಳಿಕೆ ನೀಡಿರುವ ಯತ್ನಾಳ್‌ ಅವರಿಂದಲೇ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ನ ವಕ್ತಾರ ಮಂಜುನಾಥ್‌ ಎಸಿಬಿಗೆ ದೂರು ನೀಡಿದ್ದಾರೆ.

25 ಮಂದಿ ಅಭ್ಯರ್ಥಿಗಳ ವಿಚಾರಣೆ
ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬುಧವಾರ 25 ಮಂದಿ ಅಭ್ಯರ್ಥಿಗಳನ್ನು ಸಿಐಡಿ ವಿಚಾರಣೆ ನಡೆಸಿದೆ. ಪ್ರತಿಯೊಬ್ಬ ಅಭ್ಯರ್ಥಿಯ ಒಎಂಆರ್‌ ಶೀಟ್‌, ಕಾರ್ಬನ್‌ ಶೀಟ್‌, ಬ್ಯಾಂಕ್‌ ಖಾತೆ ವಿವರ ಮತ್ತು ಅವರ ಹಿನ್ನೆಲೆ ಹಾಗೂ ಇತರ ಮಾಹಿತಿ ಸಂಗ್ರಹಿಸಿದ್ದಾರೆ. ಇದುವರೆಗೂ 440 ಮಂದಿ ಅಭ್ಯರ್ಥಿಗಳ ವಿಚಾರಣೆ ನಡೆಸಲಾಗಿದೆ


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ