Breaking News

ಸುಳ್ಳು ಆರೋಪದ ಹಿನ್ನೆಲೆ ಮಹಿಳೆ ಮೇಲೆ ಹಲ್ಲೆ ನಡೆಸಿದ ಅಬಕಾರಿ ಪೊಲೀಸರು..

Spread the love

ಚಂದ್ರವ್ವಳ ಮೇಲೆ ಅಕ್ರಮ ಸಾರಾಯಿ ಮಾರಾಟ ಸುಳ್ಳು ಆರೋಪ..
ಮಹಿಳೆ ಮೇಲೆ ಅಬಕಾರಿ ಇನ್ಸ್ಪೆಕ್ಟರ್ ಸೇರಿ ನಾಲ್ವರಿಂದ ಹಲ್ಲೆ ಆರೋಪ..
ಜಮಖಂಡಿ ಅಬಕಾರಿ ಇನ್ಸ್ಪೆಕ್ಟರ್ ಗೀತಾ ತೆಗ್ಗಿ,ಸಿಬ್ನಂದಿ ಆನಂದ್, ಹಣಮಂತ್,ಕಲ್ಯಾಣಿ ವಿರುದ್ಧ ಎಪ್ಐಆರ್…

ಅವ್ರು ಸಿಎಲ್ ಪೋರ್ ಅರ್ಜಿದಾರರು. ಅವ್ರ ಮನವಿಗೆ ಅಬಕಾರಿ ಇಲಾಖೆ ಸಿಬ್ಬಂದಿಗಳು ಸ್ಪಂಧಿಸಿಲ್ಲ. ಜಿಲ್ಲಾ ಅಬಕಾರಿ ಡಿಸಿ ಬಳಿ ಹೊಗಿದ್ದೆ ಆ ಕುಟುಂಬದ ಮಹಿಳೆ ಮೇಲೆ ಅಬಕಾರಿ ಅಧಿಕಾರಿಗಳಿಂದ ಹಲ್ಲೆಗೆ ಕಾರಣ.ಅಲ್ಲದೆ ಅಕ್ರಮ ಸರಾಯಿ ಮಾರಾಟದಲ್ಲಿ ಆ ಕುಟುಂಬ ಸಿಕ್ಕಿಸುವ ತಂತ್ರಕ್ಕೆ ಅಧಿಕಾರಿಗಳು ಮುಂದಾಗಿ ಇದೀಗ ಅಧಿಕಾರಿಗಳ ವಿರುದ್ಧ ಸಂತ್ರಸ್ತ ಕುಟುಂಬ ದೂರು ನೀಡಿದೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…

ಒಂದೆಡೆ ಅಬಕಾರಿ ಅಧಿಕಾರಿಗಳಿಗೆ ಸಿಎಲ್ ಪೋರ್ ಗಾಗಿ ಸ್ಥಳ ಪರಿಶಿಲನೆಗೆ ಕಾಲ್ ಮಾಡಿ ಮನವಿ ಮಾಡಿಕೊಂಡ ವ್ಯಕ್ತಿ.ಮತ್ತೊಂದೆಡೆ ಮನವಿಗೆ ಸ್ಪಂದಿಸಿದ ಅಧಿಕಾರಿಯನ್ನ ಬಿಟ್ಟು ಜಿಲ್ಲಾ ಅಬಕಾರಿ ಡಿಸಿಗೆ ಮನವಿ ಮಾಡಿ ಪರಿಶೀಲನೆ ಮಾಡುವಂತೆ ಮನವಿ ಮಾಡಿದ ಸಂತ್ರಸ್ತರು. ಇನ್ನೊಂದೆಡೆ ನಮ್ಮನ್ನ ಮೀರಿ ಜಿಲ್ಲಾ ಮಟ್ಟದ ಅಧಿಕಾರಿಗಳ ಮೊರೆ ಹೊದ ಕುಟುಂಬದ ಮೇಲೆ ಅಕ್ರಮ ಸರಾಯಿ ಮಾರಾಟ ಆರೋಪ ಹೊರಿಸಿ ಮನೆಯಲ್ಲಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆಂದು ಅಬಕಾರಿ ಇನ್ಸ್ಪೆಕ್ಟರ್ ವಿರುದ್ಧ ದೂರು. ಇಂತಹ ಘಟನೆ ನಡೆದಿದ್ದು ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದಲ್ಲಿ.ಹೌದು ಜಮಖಂಡಿ ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್ ಗೀತಾ ತೆಗ್ಗಿ ನೇತೃತ್ವದ ಮೂವರ ತಂಡ ನಾವಲಗಿ ಗ್ರಾಮದ ಚಂದ್ರವ್ವ ಕದಂ ಎಂಬ ಮಹಿಳೆ ಮನೆ ಮೇಲೆ ಅಕ್ರಮ ಸರಾಯಿ ಮಾರಾಟ ಆರೋಪದ ಮೇಲೆ ದಾಳಿ ನಡೆಸಿದ್ದಾರೆ.ದಾಳಿ ವೇಳೆ ಮನೆಯಲ್ಲಿದ್ದ ಚಂದ್ರವ್ವ ಕದಂ ಮೇಲೆ ಅಬಕಾರಿ ಇನ್ಸ್‌ಪೆಕ್ಟರ್ ಗೀತಾ ತೆಗ್ಗಿ ಹಾಗೂ ಸಿಬ್ಬಂದಿಗಳಾದ ಆನಂದ್, ಹಣಮಂತ್ ಹಶಗೂ ಕಲ್ಯಾಣಿ ಹಲ್ಲೆ ನಡೆಸಿದ್ದಾರೆಂದು ಸಂತ್ರಸ್ತೆ ಆರೋಪಿಸಿದ್ದಾರೆ..

ಇನ್ನು ಸುಳ್ಳು ಅಕ್ರಮ ಸಾರಾಯಿ ಮಾರಾಟ ಆರೋಪ ಹೊರಿಸಿ ಮನೆಗೆ ಬಂದು ಹಲ್ಲೆ ನಡೆಸಿದ ಅಬಕಾರಿ ಪೊಲೀಸರ ಮೇಲೆ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಚಂದ್ರವ್ವ ಕದಂ ದೂರು ದಾಖಲಿಸಿದ್ದಾಳೆ. ದೂರವಾಣಿ ನಲ್ಲಿ ಜಮಖಂಡಿ ಅಬಕಾರಿ ಇನ್ಸ್ಪೆಕ್ಟರ್ ಗೀತಾ ತೆಗ್ಗಿ,ಸಿಬ್ನಂದಿ ಆನಂದ್, ಹಣಮಂತ್,ಕಲ್ಯಾಣಿ ವಿರುದ್ಧ ಎಪ್ಐಆರ್ ದಾಖಲಾಗಿದೆ.ಅಧಿಕಾರಿಗಳು ಹಲ್ಲೆ ಮಾಡಲು ಕಾರಣ ಅಂದ್ರೆ ಚಂದ್ರವ್ವ ಕದಂ ಅವ್ರ ಮಕ್ಕಳು ಸಿಎಲ್ ಪೋರ್ ಗೆ ಸ್ಥಳ ಪರಿಶೀಲನೆ ಅಬಕಾರಿ ಇನ್ಸ್‌ಪೆಕ್ಟರ್ ಗೀತಾ ತೆಗ್ಗಿಗೆ ಮನವಿ ಮಾಡಿದ್ರು.ಗೀತಾ ತೆಗ್ಗಿ ಪರಿಶೀಲನೆಗೆ ಬಾರದಿದ್ದಾಗ ಮೇಲಾದಿಕಾರಿಗಳನ್ನ ಭೇಟಿಯಾಗಿದ್ರು.ಇದೇ ಕಾರಣಕ್ಕೆ ಈ ಕುಟುಂಬದ ಮೇಲೆ ಅಬಕಾರಿ ಇನ್ಸ್‌ಪೆಕ್ಟರ್ ಗೀತಾ ತೆಗ್ಗಿ ಟಾರ್ಗೆಟ್ ಮಾಡಿ ಹಲ್ಲೆ ನಡೆಸಿದ್ದಾಳೆ ಎಂದು ಚಂದ್ರವ್ವಳ ಮಗ ಆರೋಪಿಸಿದ್ದಾರೆ…

ಒಟ್ಟಿನಲ್ಲಿ ಅಬಕಾರಿ ಇಲಾಖೆಯಲ್ಲಿ ಕೆಲಸ ಕಾರ್ಯಗಳು ಸುಸೂತ್ರವಾಗಿ ಆಗಬೇಕು ಅಂದ್ರೆ ಅಧಿಕಾರಿಗಳನ್ನ ಚನ್ನಾಗಿ ನೋಡ್ಕೋಬೇಕು.ಇಲ್ಲಾಂದ್ರೆ ಕೆಲ್ಸಾ ಆಗಲ್ಲ ಅನ್ನೋದು ಈ ಪ್ರಕರಣದಿಂದ ಮತ್ತೊಮ್ಮೆ ಬಹಿರಂಗಗೊಂಡಿದ್ದಂತೂ ಸುಳ್ಳಲ್ಲ…


Spread the love

About Laxminews 24x7

Check Also

ಅಹಿಂದ ಮತಗಳೇ ಕಾಂಗ್ರೆಸ್ ಭದ್ರ ಬುನಾದಿ: ಮತಗಳ್ಳತನ ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯೆ!

Spread the loveಅಹಿಂದ ವರ್ಗಗಳೇ ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ಗೃಹ ಸಚಿವ ಜಿ. ಪರಮೇಶ್ವರ ಇಂದು ದೃಢವಾಗಿ ಪ್ರತಿಪಾದಿಸಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ