Breaking News

ಅಕ್ಕ ಪ್ರಿಯತಮನ ಜೊತೆ ಕಾಣೆಯಾಗಿದ್ದಾಳೆ ಎಂದು ತಿಳಿದು ತಂಗಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ

Spread the love

ಉಡುಪಿ: ಅಕ್ಕ ಪ್ರಿಯತಮನ ಜೊತೆ ಕಾಣೆಯಾಗಿದ್ದಾಳೆ ಎಂದು ತಿಳಿದು ತಂಗಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಮಂಜಲ್ತಾರ್ ಎಂಬಲ್ಲಿ ನಡೆದಿದೆ.

ಶ್ವೇತಾ ಮೃತ ಸಹೋದರಿ. ಮಾಳದ ನಿವಾಸಿ ಎರಡು ದಿನಗಳ ಹಿಂದೆ ಸ್ಥಳೀಯ ಫುಡ್ ಪ್ರೋಡಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭುವನ್ ಜೊತೆ ಪರಾರಿಯಾಗಿದ್ದಳು. ಇಂದು ಯುವತಿ ತನ್ನ ಸಹೋದರಿ ಶ್ವೇತಾಳಿಗೆ ಫೋನ್ ಮಾಡಿದ್ದಾಳೆ.

ಈ ವೇಳೆ ತನಗೆ ನಿಶ್ಚಯವಾದ ಹುಡುಗನ ಜೊತೆ ವಿವಾಹವಾಗಲು ಇಷ್ಟ ಇಲ್ಲ. ತಾನು ಪ್ರೀತಿಸಿದ ಯುವಕನ ಜೊತೆ ಬಂದಿರುವುದಾಗಿ ಹೇಳಿದ್ದಾಳೆ. ಅಕ್ಕನ ಫೋನ್ ಕರೆಯಿಂದ ಶಾಕ್ ಆದ ತಂಗಿ ಶ್ವೇತಾ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.

ಭುವನ್ ಮೂಲತಃ ಅಸ್ಸಾಂ ರಾಜ್ಯದ ನಿವಾಸಿಯಾಗಿದ್ದು, ಕಳೆದ ಏಳೆಂಟು ವರ್ಷಗಳಿಂದ ಬಜಗೋಳಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ. ಒಂದೇ ಕಂಪನಿಯಲ್ಲಿ ಕೆಲಸ ಮಾಡುವ ಕಾರಣ ಯುವತಿ ಮತ್ತು ಭುವನ್ ನಡುವೆ ಪ್ರೇಮಾಂಕುರವಾಗಿತ್ತು. ಈ ನಡುವೆ ಯುವತಿ ಮನೆಯವರು ಮದುವೆ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಸುರಕ್ಷಿತಾ ಪ್ರಿಯತಮ ಜೊತೆ ಓಡಿ ಹೋಗಿದ್ದಾಳೆ.

ಶ್ವೇತಾಳಿಗೆ ಮೂರ್ಛೆರೋಗ ಆಗಾಗ ಬಾಧಿಸುತ್ತಿತ್ತು. ಹೀಗಾಗಿ ಸಹೋದರಿ ಪರಾರಿಯಾಗಿರುವ ಕಾರಣ ಮಾನಸಿಕ ಒತ್ತಡದಿಂದ ಶ್ವೇತಾ ಕುಸಿದುಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ