Breaking News

ಅಂಬಾನಿಯನ್ನು ಹಿಂದಿಕ್ಕಿದ ಅದಾನಿ; ಗೌತಮ್ ಈಗ ಏಷ್ಯಾದ ಅತಿ ಶ್ರೀಮಂತ..

Spread the love

ಮುಂಬೈ: ಅದಾನಿ ಗ್ರೂಪ್​ನ ಚೇರ್ಮನ್ ಗೌತಮ್​ ಅದಾನಿ ಇದೀಗ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯಾಗುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್​ನ ಚೇರ್ಮನ್​ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ.

ಬ್ಲೂಮ್​ಬರ್ಗ್​ ಬಿಲಿಯನೇರ್ಸ್​ ಇಂಡೆಕ್ಸ್​ನ ಹೊಸ ಪಟ್ಟಿ ಪ್ರಕಾರ ಗೌತಮ್ ಅದಾನಿಯ ಒಟ್ಟು ಆಸ್ತಿ 10,000 ಕೋಟಿ (100 ಬಿಲಿಯನ್) ಡಾಲರ್ ಆಗಿದ್ದು, ಈ ಮೂಲಕ ಅವರು ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಟಾಪ್​-10 ಸ್ಥಾನದಲ್ಲಿದ್ದಾರೆ.

ಮತ್ತೊಂದೆಡೆ ಮುಖೇಶ್ ಅಂಬಾನಿ 9,900 ಕೋಟಿ (99 ಬಿಲಿಯನ್​) ಡಾಲರ್ ಆಸ್ತಿ ಮೂಲಕ ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ತಲುಪಿದ್ದಾರೆ.

ಅದಾನಿ-ಅಂಬಾನಿ ಇಬ್ಬರೂ ಹಲವು ಕ್ಷೇತ್ರಗಳಲ್ಲಿ ವ್ಯಾಪಾರ-ವಹಿವಾಟು ಹೊಂದಿದ್ದು ಕಳೆದ ಕೆಲವು ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಭಾರಿ ಪೈಪೋಟಿ ನಡೆಯುತ್ತಿದ್ದು, ಹಿಂದಿನ ಒಂದು ವಾರದ ಬೆಳವಣಿಗೆ ಅದಾನಿಗೆ ಭಾರಿ ಲಾಭ ತಂದುಕೊಟ್ಟಿದೆ.

ಅದಾನಿ ಗ್ರೂಪ್ ಆಫ್ ಎಡಿಬಲ್ ಆಯಿಲ್ ಕಂಪನಿ ಅದಾನಿ ವಿಲ್​-ಮರ್​ನ ಷೇರಿನಲ್ಲಿ ಶೇ. 30 ಹೆಚ್ಚಳವಾಗಿದ್ದು, ಅದಾನಿ ವಿಲ್​ಮರ್​ನ ಇನಿಷಿಯಲ್ ಪಬ್ಲಿಕ್ ಆಫರ್​ನಿಂದ 3,600 ಕೋಟಿ ರೂ. ಸಂಗ್ರಹವಾಗಿತ್ತು. ಇನ್ನು ರಷ್ಯಾ-ಯೂಕ್ರೇನ್​ ಯುದ್ಧದ ಪರಿಣಾಮ ಅದಾನಿ ಕಂಪನಿಯ ಷೇರಿನಲ್ಲಿ ಭಾರಿ ಬೆಳವಣಿಗೆ ಆಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ