Breaking News

ವೇಶ್ಯಾವಾಟಿಕೆ ದೋಖಾ: ರೇಟ್​ ಫಿಕ್ಸ್​ ಮಾಡಿ ಸ್ವರ್ಗ ತೋರಿಸ್ತೀವಿ ಅಂತಾರೆ. ಆಮೇಲೆ ಆಗೋದೇ ಬೇರೆ

Spread the love

 ಆನೇಕಲ್​ನ ಪ್ರತಿಷ್ಠಿತ ಬಡಾವಣೆಯಲ್ಲಿ ಆನ್​ಲೈನ್​ ವೇಶ್ಯಾವಾಟಿಕೆ ದೋಖಾ ಬಯಲಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಚಂದದ ಫೋಟೋ ಹಾಕಿ ನೈಟ್​ಗೆ ಇಷ್ಟು, ಗಂಟೆಗೆ ಇಷ್ಟು ಅಂತ ರೇಟ್​ ಫಿಕ್ಸ್​ ಮಾಡಿ ಹಣ ವಸೂಲಿ ಮಾಡುತ್ತಿದ್ದರು.

ಪ್ರತಿಷ್ಠಿತ ಕಾಲೇಜೊಂದರ ಕೆಲ ವಿದ್ಯಾರ್ಥಿಗಳು ಈ ಜಾಲದಲ್ಲಿ ಆಕ್ಟಿವ್ ಆಗಿದ್ದರು ಎಂಬ ಆಘಾತಕಾರಿ ವಿಷಯವೂ ಬಯಲಾಗಿದೆ.

, ವರದಿ ಪ್ರಸಾರ ಆಗುತ್ತಿದ್ದಂತೆ ಭವ್ಯಶ್ರೀ ಹೆಸರಿನಲ್ಲಿದ್ದ ಫೇಸ್​ಬುಕ್ ಅಕೌಂಟ್ ಡಿಲೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ಖೆಡ್ಡಕ್ಕೆ ಕೆಡವುತ್ತಿದ್ದ ಅಕೌಂಟ್ ಇದು.

ಆನೇಕಲ್ ಪಟ್ಟಣ ಹಾಗೂ ಚಂದಾಪುರ ರಸ್ತೆಯ ಖಾಸಗಿ ಬಡಾವಣೆಯಲ್ಲಿ ಮಾಂಸದಂಧೆ ನಡೆಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯವಹಾರ ಕುದುರಿಸುತ್ತಿದ್ದ ಖತರ್ನಾಕ್​ ಗ್ಯಾಂಗ್​, ಚಂದ ಚಂದದ ಹುಡುಗಿಯರ ಫೋಟೋ ಕಳಿಸಿ ಯಾರು ಬೇಕು ಆಯ್ಕೆ ಮಾಡಿಕೊಳ್ಳಿ ಎಂದು ಯುವಕರಿಗೆ ಗಾಳ ಹಾಕುತ್ತಿದ್ದರು. ಹುಡುಗಿಯರ ಫೋಟೋ ಕಳಿಸೋಕು ಮುನ್ನ ಅವರಿಂದ ಇಂತಿಷ್ಟು ಹಣ ಎಂದು ಆನ್​ಲೈನ್​ ಮೂಲಕ ತಮ್ಮ ಅಕೌಂಟ್​ಗೆ ಹಾಕಿಸಿಕೊಳ್ಳುತ್ತಿದ್ದರು. ಹುಡುಗಿ ಫೋಟೋ ಆಯ್ಕೆ ಮಾಡುತ್ತಿದ್ದಂತೆ, 2 ಗಂಟೆಗೆ 3 ಸಾವಿರ, ರಾತ್ರಿಯಿಡೀ 6 ಸಾವಿರ, ಆಡಿಯೋ ಕಾಲ್​ 1 ಗಂಟೆಗೆ 500 ರೂಪಾಯಿ, ವಿಡಿಯೋ ಕಾಲ್​ 30 ನಿಮಿಷಕ್ಕೆ 500 ರೂಪಾಯಿ, ಬಾಡಿ ಮಸಾಜ್, ಫುಲ್​ ಡೇ​…ಗೆ ಇಂತಿಷ್ಟು ಎಂದು ರೇಟ್​ ಫಿಕ್ಸ್​ ಇದೆ. ಯಾವುದು ಓಕೆ? ಆ ಗ್ಯಾಂಗ್​ ಮೆಸೇಜ್​ ಕಳಿಸುತ್ತಿತ್ತು… ಹುಡುಗಿಯರ ಜತೆ ಸೇರುವ ಇಂಗಿತ ವ್ಯಕ್ತವಾಗುತ್ತಿದ್ದಂತೆ ಯುವಕರಿಂದ ಮುಂಗಡ ಹಣ ಕಟ್ಟಿಸಿಕೊಂದು ಸ್ವರ್ಗ ತೋರಿಸ್ತೀವಿ ಬನ್ನಿ ಎಂದು ಲೊಕೇಷನ್​ ಶೇರ್​ ಮಾಡ್ತಿದ್ದರು.

ಆನೇಕಲ್ ಪಟ್ಟಣ ಹಾಗೂ ಚಂದಾಪುರ ರಸ್ತೆಯ ಖಾಸಗಿ ಬಡಾವಣೆಯ ಲೊಕೇಷನ್​ಗೆ ಹೋಗಿ ಗ್ರಾಹಕರು ಕಾಲ್​ ಮಾಡಿದ್ರೆ ನೋ ರೆಸ್ಪಾನ್ಸ್​. ನಂಬರ್​ ಬ್ಲಾಕ್​/ ನಾಟ್​ ರೀಚಬಲ್​ ಆಗಿರೋದು… ಮರ್ಯಾದೆಗೆ ಹೆದರಿ ಹಣ ಕಳೆದುಕೊಂಡವರು ಯಾರ ಬಳಿಯೂ ಈ ಬಗ್ಗೆ ಹೇಳಿಕೊಳ್ಳದ ಕಾರಣ ದಂಧೆಕೋರರಿಗೆ ಇದು ಬಂಡವಾಳವಾಯ್ತು. ಹಣ ಕಳೆದುಕೊಂಡ ಯುವಕನೊಬ್ಬ ​ ಬಳಿ ಅಳಲು ತೋಡಿಕೊಂಡಿದ್ದು, ಆ ಗ್ಯಾಂಗ್​ ವೊಡ್ಡಿದ ಆಮಿಷ, ಕಳಿಸಿದ ಮೆಸೇಜ್​, ಫೋಟೋ ಎಲ್ಲವನ್ನೂ ಬಯಲು ಮಾಡಿದ್ದಾರೆ.

ಚಂದಾಪುರ ರಸ್ತೆಯ ಖಾಸಗಿ ಬಡಾವಣೆಯ ಮನೆಯೊಂದರಲ್ಲಿ ಮಾಂಸದಂಧೆ ನಡೆಯುತ್ತಿದ್ದು, ರಾತ್ರಿ ಆಗುತ್ತಿದ್ದಂತೆ ಕೆಲ ವಿದ್ಯಾರ್ಥಿಗಳೂ ಭಾಗಿಯಾಗಿದ್ದಾರೆ. ಈ ದಂಧೆ ಮೂಲಕ ಹಣ ಪೀಕುವ ಕೆಲಸ ಮಾಡುತ್ತಿದ್ದಾರೆ. 

CREDITS TO DIGVIJAYANEWS


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ