Breaking News

ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳನ್ನು ಕದ್ದು ತಮಿಳುನಾಡಿನಲ್ಲಿ ಮಾರಾಟ: ಮೂವರು ಸೆರೆ

Spread the love

ಬೆಂಗಳೂರು: ಬೆಂಗಳೂರಿನಲ್ಲಿ ಕಾರುಗಳನ್ನು ಕಳ್ಳತನ ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಗೋಪಿ, ಇಮ್ಯಾನ್ಯುಯಲ್ ಹಾಗೂ ಮೋಹನ್ ರಾಜು ಬಂಧಿತರು. ಆರೋಪಿಗಳ ಪೈಕಿ ಗೋಪಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಬೇಗೂರು ಪೊಲೀಸರಿಂದ ಬಂಧಿತನಾಗಿದ್ದು, ವಿಚಾರಣೆ ವೇಳೆ ಇಮ್ಯಾನ್ಯುಯಲ್, ಮೋಹನ್ ರಾಜು ಜೊತೆ ಸೇರಿ ಕಾರು ಕಳ್ಳತನದ ದಂಧೆಯಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದ.

ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅವುಗಳಿಗೆ ಬೇರೆ ಆ್ಯಕ್ಸಿಡೆಂಟ್ ಆದ ಗುಜರಿಗೆ ಕಳಿಸಲಾದ ಕಾರುಗಳ ಚಾಸ್ಸಿ ನಂಬರ್ ಜೋಡಿಸಿ ತಮಿಳುನಾಡು ಭಾಗದಲ್ಲಿ ಮಾರಾಟ ಮಾಡುತ್ತಿದ್ದರು. ಸದ್ಯ ಮೂವರೂ ಆರೋಪಿಗಳನ್ನು ಬಂಧಿಸಿರುವ ಬೇಗೂರು ಠಾಣಾ ಪೊಲೀಸರು ಬರೋಬ್ಬರಿ 1 ಕೋಟಿ 55 ಲಕ್ಷ ರೂ. ಮೌಲ್ಯದ 6 ಇನೋವಾ, 1 ಟೊಯೋಟಾ ಇಟಿಯೋಸ್ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ