Breaking News

ಹಿಜಬ್ ದ್ವೇಷದಿಂದ ನಮಗೆ ಪರೀಕ್ಷೆ ಬರೆಯಲು ಆಗಿಲ್ಲ: ವಿದ್ಯಾರ್ಥಿನಿ

Spread the love

ಉಡುಪಿ: ಇಂದು ನಮಗೆ ಅಂತಿಮ ಪ್ರಾಕ್ಟಿಕಲ್ ಪರೀಕ್ಷೆ ಇತ್ತು. ಆದರೆ ಹಿಜಬ್ ಕುರಿತಾದ ದ್ವೇಷದಿಂದ ನಮಗೆ ಪರೀಕ್ಷೆ ಬರೆಯಲು ಆಗಲಿಲ್ಲ ಎಂದು ಉಡುಪಿಯ ಹಿಜಬ್ ಹೋರಾಟಗಾರ್ತಿ ಅಲ್ಮಾಸ್ ಆಕ್ರೋಶ ವ್ಯಕ್ತಪಡಿಸಿದಳು.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ನಮಗೆ ಅಂತಿಮ ಪ್ರಾಕ್ಟಿಕಲ್ ಪರೀಕ್ಷೆ ಇತ್ತು. ನಾವು ವಿಜ್ಞಾನದ ರೆಕಾರ್ಡ್ ಬುಕ್ ಪೂರ್ಣಗೊಳಿಸಿದ್ದೇನೆ. ಅಪಾರ ನಿರೀಕ್ಷೆಯೊಂದಿಗೆ ನಾವು ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದೆವು. ನಮ್ಮ ಪ್ರಾಂಶುಪಾಲರು ನಮಗೆ ಪರೀಕ್ಷೆ ಬರೆಯುವ ಅವಕಾಶ ಕೊಡಲಿಲ್ಲ ಎಂದು ಕಿಡಿಕಾರಿದಳು.

ಪ್ರಾಂಶುಪಾಲರು 5 ನಿಮಿಷದಲ್ಲಿ ಜಾಗ ಖಾಲಿ ಮಾಡದಿದ್ದರೆ, ಪೊಲೀಸ್ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಂದುಕೊಂಡಂತೆ ನಡೆದಿದ್ದರೆ ನಾವು ಲ್ಯಾಬ್ ಪರೀಕ್ಷೆ ಬರೆದು ಮುಗಿಸಬೇಕಿತ್ತು. ಹಿಜಬ್ ಕುರಿತಾದ ದ್ವೇಷದಿಂದ ಈ ಪರಿಸ್ಥಿತಿ ನಮಗೆ ಬಂದೊದಗಿದೆ ಎಂದು ವಾಗ್ದಾಳಿ ನಡೆಸಿದಳು. 


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ