Breaking News

ಸದನದ ಸಮಯ ಹಾಳಾಯ್ತು ಎಂದು ಯಾರೂ ನಮ್ಮನ್ನು ಕೇಳಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

Spread the love

ಬೆಂಗಳೂರು: ಸದನದ ಸಮಯ ಹಾಳಾಯ್ತು ಎಂದು ಯಾರೂ ಇಲ್ಲಿಯವರೆಗೂ ನಮ್ಮನ್ನ ಕೇಳಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟ ಮುಂದುವರಿಸಿದ್ದೇವೆ. ಬಿಜೆಪಿಯವರಿಗೆ ಕಣ್ಣು ಕಾಣ್ತಿಲ್ಲ, ಕಿವಿಯೂ ಕೇಳ್ತಿಲ್ಲ. ಜನಪರ ಕಾಳಜಿ ಯಾರಿಗೆ ಇದೆ ಎಂದು ಜನರಿಗೆ ಗೊತ್ತಿದೆ ಎಂದರು.

ಕೊರೊನಾ, ಪ್ರವಾಹ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ರಾಷ್ಟ್ರ ಧ್ವಜದ ಬಗ್ಗೆ ಅಪಮಾನ ಮಾಡಿದವರ ಬಗ್ಗೆ ಪ್ರತಿಭಟನೆ ಮಾಡಬಾರದಾ?. ಇದು ಕಾಂಗ್ರೆಸ್​​​ನ ಹೋರಾಟ ಅಲ್ಲ. ಇದು ದೇಶದ ಹೋರಾಟ. ನಾನೂ ಫೇಸ್​​ಬುಕ್, ಟ್ವಿಟರ್, ಇನ್​​ಸ್ಟಾಗ್ರಾಂನಲ್ಲಿ ಆ್ಯಕ್ಟಿವ್ ಆಗಿದ್ದೇನೆ. ನನಗೆ ಆ ರೀತಿಯ ವಿರೋಧ ವ್ಯಕ್ತವಾಗಿಲ್ಲ ಎಂದು ತಿಳಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ