Breaking News
Home / ರಾಜಕೀಯ / ಬಿಟ್‍ಕಾಯಿನ್ ಕೇಸ್‍ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾತು ಸೆಟ್ಲ್‍ಮೆಂಟ್ ತರ ಇದೆ.: ಪ್ರಿಯಾಂಕ್ ಖರ್ಗೆ

ಬಿಟ್‍ಕಾಯಿನ್ ಕೇಸ್‍ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾತು ಸೆಟ್ಲ್‍ಮೆಂಟ್ ತರ ಇದೆ.: ಪ್ರಿಯಾಂಕ್ ಖರ್ಗೆ

Spread the love

ಬಿಟ್‍ಕಾಯಿನ್ ಕೇಸ್‍ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾತು ಸೆಟ್ಲ್‍ಮೆಂಟ್ ತರ ಇದೆ. ಪ್ರಕರಣದಲ್ಲಿ ನಾವೂ ಇದೀವಿ, ನೀವೂ ಇದೀರಿ. ಎಲ್ಲರೂ ಸೆಟ್ಲ್‍ಮೆಂಟ್ ಮಾಡಿಕೊಳ್ಳೋಣ ಬನ್ನಿ ಅನ್ನುವಂತಿದೆ. ಈ ಪ್ರಕರಣ ಅಷ್ಟು ಮುಖ್ಯವಲ್ಲ ಎಂದು ಸಿಎಂ ಹೇಳುತ್ತಾರೆ. ಹಾಗಾದ್ರೆ ಪ್ರಧಾನಿ ಮೋದಿ ಬಳಿ ಹೋಗಿ ಏಕೆ ಚರ್ಚಿಸಿದ್ರು ಎಂದು ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬಿಟ್ ಕಾಯಿನ್ ಕಿತ್ತಾಟಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷದ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿ ಬಿದ್ದಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೈ ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಿಟ್ ಕಾಯಿನ್ ಪ್ರಕರಣ ದೊಡ್ಡ ಹಗರಣವಾಗಿದೆ. 2020ರ ನವೆಂಬರ್ 14 ರಂದು ಶ್ರೀಕಿ ಸರಂಡರ್ ಆಗ್ತಾರೆ. ಹೋಟೆಲ್ ಮೌರ್ಯದಲ್ಲಿ ಸಿಸಿಬಿಯವರಿಗೆ ಸರಂಡರ್ ಆಗ್ತಾರೆ. 3 ದಿನ ಪ್ರಕರಣ ಸಂಬಂಧ ಯಾವುದೇ ರಿಪೆÇೀರ್ಟ್ ಆಗಲ್ಲ. 2020ರ ನವೆಂಬರ್ 17 ರಂದು ಪ್ರಕರಣ ದಾಖಲಾಗುತ್ತದೆ. ಕ್ರೈಂ ನಂಬರ್ 91/2020ರ ಅಡಿ ಪ್ರಕರಣ ದಾಖಲಾಗುತ್ತದೆ. ಬಳಿಕ 14 ದಿನ ಪೆÇಲೀಸ್ ಕಸ್ಟಡಿಗೆ ಪಡೆಯುತ್ತಾರೆ. ಬಳಿಕ ಕ್ರೈಂ ಸಂ. 153/2020ರ ಅಡಿ ಮತ್ತೊಮ್ಮೆ ಪ್ರಕರಣ ದಾಖಲಾಗುತ್ತದೆ. ಹೈಡ್ರೋ ಗಾಂಜಾ ತರಿಸುತ್ತಿದ್ದ ಆರೋಪದಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ. ಕ್ರೈಂ ಸಂ. 287/2020ರ ಅಡಿ ಮತ್ತೊಂದು ಪ್ರಕರಣ, 2020ರ ನವೆಂಬರ್ 19ರಂದು ಪ್ರಕರಣ ದಾಖಲಾಗುತ್ತೆ. ಕ್ರೈ ಸಂ. 45/2020ರಡಿ ಮತ್ತೊಂದು ಪ್ರಕರಣದಲ್ಲಿ ಮತ್ತೊಮ್ಮೆ ಪೆÇಲೀಸ್ ಕಸ್ಟಡಿಗೆ ಪಡೆಯಲಾಗುತ್ತದೆ. ಇಲ್ಲಿ ಬಿಟ್ ಕಾಯಿನ್ ವಿಚಾರ ಪ್ರಸ್ತಾಪವಾಗುತ್ತದೆ. ಈಗ ಬಿಟ್ ಕಾಯಿನ್ ಪ್ರಕರಣದ ಸತ್ಯ ಮುಚ್ಚಿಹಾಕಲು ಯತ್ನ ನಡೆಸಲಾಗುತ್ತಿದೆ ಎಂದರು ಆರೋಪಿಸಿದರು.

ಇನ್ನು 2021 ಜನವರಿ 8ರಂದು ಪಂಚನಾಮೆ ಹೊರಗೆ ಬರುತ್ತದೆ. ಕ್ರೈಂ ನಂಬರ್ 45/2020 ಪ್ರಕರಣ ಸಂಬಂಧ ಪಂಚನಾಮೆ ಮಾಡಲಾಗುತ್ತದೆ. ಕ್ರಿಪೆÇ್ಟೀ ಕರೆನ್ಸಿ ರಿಕವರಿ ಬಗ್ಗೆ ಪಂಚನಾಮೆಯಲ್ಲಿ ಉಲ್ಲೇಖವಿದೆ. ಪಂಚನಾಮೆಗಾಗಿ ಲೈನ್‍ಮ್ಯಾನ್, ಪವರ್ ಮ್ಯಾನ್ ಕರೆಸುತ್ತಾರೆ. ಸಾಕ್ಷಿಧಾರರಾಗಿ ಲೈನ್‍ಮ್ಯಾನ್, ಪವರ್ ಮ್ಯಾನ್ ಕರೆಸುತ್ತಾರೆ. 31 ಬಿಟ್ ಕಾಯಿನ್ ಸಿಕ್ಕಾಗ ರಿಕವರಿ ಪ್ರಕ್ರಿಯೆಗೆ ಕರೆಸುತ್ತಾರೆ. ನಮಗೇ ಕ್ರಿಪೆÇ್ಟೀ ಕರೆನ್ಸಿ, ಬಿಟ್ ಕಾಯಿನ್ ಬಗ್ಗೆ ಗೊತ್ತಿಲ್ಲ. ಅಂತಹದರಲ್ಲಿ ಲೈನ್‍ಮ್ಯಾನ್, ಪವರ್ ಮ್ಯಾನ್‍ಗೆ ಏನು ಗೊತ್ತಿರುತ್ತೆ ಎಂದು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಸರ್ಕಾರ ನಮ್ಮನ್ನು ಬ್ಲ್ಯಾಕ್‍ಮೇಲ್ ಮಾಡುವುದು ಬೇಡ. ನಮ್ಮವರು ಯಾರಾದರೂ ಭಾಗಿಯಾಗಿದ್ದರೆ ಒದ್ದು ಒಳಹಾಕಿ. ಬಿಟ್ ಕಾಯಿನ್ ಪ್ರಕರಣ ಡೈವರ್ಟ್ ಮಾಡಲು ಕಾಂಗ್ರೆಸ್ ನಾಯಕರು ಇದ್ದಾರೆಂದು ಆರೋಪ ಮಾಡ್ತಿದ್ದಾರೆ. ಏನೇನೋ ಹೇಳಿ ಜನರನ್ನು ಕನ್ಫ್ಯೂಸ್ ಮಾಡುವುದು ಬೇಡ. ಪ್ರಕರಣದಲ್ಲಿ ಯಾರೇ ಇದ್ದರೂ ಮುಲಾಜಿಲ್ಲದೆ ಬಂಧಿಸಿ ಎಂದು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಇನ್ನು ನಿನ್ನೆ ತಾನೆ ದಾಖಲೆಗಳನ್ನ ಕೂಲಂಕುಷವಾಗಿ ನೋಡಿದ್ದೇನೆ. ಸಂಪೂರ್ಣ ಮಾಹಿತಿ ಕಲೆ ಹಾಕುತ್ತೇವೆ. ಅಗತ್ಯ ಬಿದ್ರೆ ನಾವು ಪಿಐಎಲ್ ಹಾಕ್ತಿವಿ. ತಾತ್ವಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗ್ತಿದ್ವಿ. ಇದರಲ್ಲಿ ಸಿಎಂ ಪಾತ್ರ ಏನು ಎಂಬ ಪ್ರಶ್ನೆಗೆ ಖರ್ಗೆ ಉತ್ತರ ಕೊಟ್ಟಿದ್ದಾರೆ. ಸರ್ಕಾರದ ಮುಖ್ಯಸ್ಥರು ಯಾರು..? ಈ ಹಿಂದೆ ಗೃಹ ಇಲಾಖೆ ಮುಖ್ಯಸ್ಥರು ಯಾರು..? ಸೂಕ್ಷ್ಮವಾಗಿ ನಾನು ಹೇಳ್ತಾ ಇದಿನಿ ಎಂದು ಸ್ಪಷ್ಟನೆ ನೀಡಿದರು.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ